ಮುಂಬಯಿ: ಜುಲೈ 2006ರಲ್ಲಿ ನಡೆದ ಮುಂಬಯಿ ಉಪನಗರ ಸರಣಿ ರೈಲು ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ 5 ಆರೋಪಿಗಳಿಗೆ ಮಹಾರಾಷ್ಟ್ರದ ಸಂಘಟಿತ ಆರೋಪಿಗಳ ನಿಯಂತ್ರಣ ಕಾಯ್ದೆ (ಮೋಕಾ) ಕೋರ್ಟ್ ಮರಣದಂಡನೆ ವಿಧಿಸಿ ಶಿಕ್ಷೆ ಪ್ರಕಟಿಸಿದೆ.
189 ಜನರು ಸಾವನ್ನಪ್ಪಿ 800 ಮಂದಿ ಗಾಯಗೊಂಡಿದ್ದ ಈ ಸರಣಿ ಸ್ಫೋಟಕ್ಕೆ ಕಾರಣವಾದ 12 ಆರೋಪಿಗಳ ಪೈಕಿ ಐವರಿಗೆ ಗಲ್ಲು ವಿಧಿಸಿದ್ದರೆ, ಇನ್ನುಳಿದ 7 ಮಂದಿ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. 13 ಮಂದಿ ಆರೋಪಿಗಳಲ್ಲಿ ಓರ್ವನನ್ನು ಕೋರ್ಟ್ ಖುಲಾಸೆಗೊಳಿಸಿದ್ದು, ಸೆ.14ರಂದು ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸುವುದಾಗಿ ಹೇಳಿತ್ತು.
12 ಮಂದಿ ಆರೋಪಿಗಳು ಮುಂಬಯಿಯ ಸ್ಥಳೀಯ ರೈಲುಗಳಲ್ಲಿ ಬಾಂಬ್ಗಳನ್ನು ಹೂಡುವ, ಭಯೋತ್ಪಾದಕ ಚಟುವಟಿಕೆ ಮತ್ತು ಸಾಮೂಹಿಕ ಹತ್ಯೆಗಳಲ್ಲಿ ತಪ್ಪಿತಸ್ಥರೆಂದು ಕಂಡುಬಂದಿತ್ತು. ಆರೋಪಿಗಳನ್ನು ಬಾಂಬ್ಗಳನ್ನು ಹೂಡುವ, ಸಾಗಿಸುವ, ಭಯೋತ್ಪಾದಕರಿಗೆ ಆಶ್ರಯ ನೀಡುವುದು ಮುಂತಾದ ಆರೋಪದ ಮೇಲೆ ಬಂಧಿಸಲಾಗಿತ್ತು. ಆರ್ಡಿಎಕ್ಸ್ಗಳನ್ನು ಪ್ರೆಷರ್ ಕುಕರ್ಗಳ ಸಹಾಯದಿಂದ ಬಾಂಬ್ಗಳನ್ನು ಸ್ಫೋಟಿಸಲಾಗಿತ್ತು.
2006ರ ಜುಲೈ 11ರಂದು ಮುಂಬಯಿ ಉಪನಗರ ರೈಲಿನಲ್ಲಿ ಸ್ಫೋಟ ಸಂಭವಿಸಿದ್ದು, ಅಜಂ ಚೀಮಾ ಸೇರಿ ಇನ್ನೂ 14 ಮಂದಿ ನಾಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.