ನವದೆಹಲಿ: ಭಾರತೀಯ ನೌಕಾಪಡೆಯು ಅಡ್ಮಿರಲ್ಗಳ ಎಪೌಲೆಟ್ಗಳ ಹೊಸ ವಿನ್ಯಾಸವನ್ನು ಅನಾವರಣಗೊಳಿಸಿದೆ, ಎಪೌಲೆಟ್ ಅಂದರೆ ಅಧಿಕಾರಿಯ ಶ್ರೇಣಿಯನ್ನು ತೋರಿಸಲು ಧರಿಸುವ ಅಲಂಕಾರಿಕವಾದ ಭುಜದ ಪಟ್ಟಿ. ಡಿಸೆಂಬರ್ 4 ರಂದು ನೌಕಾಪಡೆಯ ದಿನದಂದು ಪ್ರಧಾನಿ ನರೇಂದ್ರ ಮೋದಿ ಅವರು ಅಡ್ಮಿರಲ್ಗಳ ಎಪೌಲೆಟ್ಗಳು “ಛತ್ರಪತಿ ಶಿವಾಜಿ ಮಹಾರಾಜರ ಪರಂಪರೆಯನ್ನು ಪ್ರತಿಬಿಂಬಿಸುತ್ತವೆ” ಎಂದು ಘೋಷಿಸಿದ್ದರು.
ಅಡ್ಮಿರಲ್ಗಳು ಭಾರತೀಯ ನೌಕಾಪಡೆಯಲ್ಲಿ ಎರಡು, ಮೂರು ಮತ್ತು ನಾಲ್ಕು-ಸ್ಟಾರ್ ಶ್ರೇಣಿಯ ಅಧಿಕಾರಿಗಳಾಗಿರುತ್ತಾರೆ. ಅಡ್ಮಿರಲ್ ನಾಲ್ಕು-ಸ್ಟಾರ್ ಶ್ರೇಣಿಯ ಅಧಿಕಾರಿಯಾಗಿದ್ದು, ನಂತರ ವೈಸ್ ಅಡ್ಮಿರಲ್ ಮತ್ತು ನಂತರ ರಿಯರ್ ಅಡ್ಮಿರಲ್, ಎರಡು-ಸ್ಟಾರ್ ಶ್ರೇಣಿಯ ಅಧಿಕಾರಿಗಳು ಇರುತ್ತಾರೆ.
ಕೆಂಪು ಬಣ್ಣದಲ್ಲಿರುವ ಅಷ್ಟಭುಜಾಕೃತಿಯ ರಾಜಮುದ್ರಾ (ರಾಯಲ್ ಸ್ಟಾಂಪ್) ಗುಲಾಮಗಿರಿಯ ಮನಸ್ಥಿತಿಯನ್ನು ತೊಡೆದುಹಾಕುವ ಸಂಕಲ್ಪವನ್ನು ಪುನರುಚ್ಚರಿಸುತ್ತದೆ. ಅಷ್ಟಭುಜಾಕೃತಿಯ ಮೇಲೆ ‘ಸತ್ಯಮೇವ ಜಯತೇ’, ಅಂದರೆ “ಸತ್ಯ ಮಾತ್ರ ಜಯಿಸುತ್ತದೆ” ಎಂದು ಬರೆಯಲಾಗಿದೆ.
As we usher in the new year #2024, #IndianNavy proudly unveils the new Design of Admirals' Epaulettes. Announced by @PMOIndia during #NavyDay2023 at Sindhudurg – the 🛑 in the new Design, drawn from the Naval Ensign & inspired from Rajmudra of #ChhatrapatiShivajiMaharaj, is a… pic.twitter.com/Ssxq8ZLOZd
— SpokespersonNavy (@indiannavy) December 29, 2023
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.