ನವದೆಹಲಿ: ದಲೈಲಾಮಾ ಅವರಿಗೆ ತಮ್ಮ ಉತ್ತರಾಧಿಕಾರಿಯನ್ನು ಆಯ್ಕೆ ಮಾಡುವ ಎಲ್ಲಾ ಹಕ್ಕಿದೆ ಎಂದು ಹೇಳುವ ಮೂಲಕ ಭಾರತ ಚೀನಾಗೆ ತಿರಗೇಟು ನೀಡಿದೆ.
ಗುರುವಾರ ಕೇಂದ್ರ ಸಚಿವ ಕಿರಣ್ ರಿಜಿಜು ಅವರು ದಲೈ ಲಾಮಾ ಅವರನ್ನು ಬೌದ್ಧರ “ಅತ್ಯಂತ ಪ್ರಮುಖ ಮತ್ತು ನಿರ್ಣಾಯಕ ಸಂಸ್ಥೆ” ಎಂದು ಕರೆದರು ಮತ್ತು ಉತ್ತರಾಧಿಕಾರಿಯಂತಹ ಮಹತ್ವದ ನಿರ್ಧಾರ ತೆಗೆದುಕೊಳ್ಳುವ ಹಕ್ಕು ಅವರನ್ನು ಬಿಟ್ಟು ಬೇರೆ ಯಾರಿಗೂ ಇಲ್ಲ ಎಂದು ಹೇಳಿದ್ದಾರೆ.
“ದಲೈಲಾಮಾ ಅವರನ್ನು ಅನುಸರಿಸುವ ಎಲ್ಲರೂ ಉತ್ತರಾಧಿಕಾರಿಯನ್ನು ಸ್ಥಾಪಿತ ಸಮಾವೇಶ ಮತ್ತು ದಲೈ ಲಾಮಾ ಅವರ ಇಚ್ಛೆಯ ಪ್ರಕಾರವೇ ನಿರ್ಧರಿಸಬೇಕು ಎಂದು ಭಾವಿಸುತ್ತಾರೆ. ದಲೈಲಾಮ ಮತ್ತು ಜಾರಿಯಲ್ಲಿರುವ ಸಂಪ್ರದಾಯಗಳನ್ನು ಹೊರತುಪಡಿಸಿ ಬೇರೆ ಯಾರಿಗೂ ಅದನ್ನು ನಿರ್ಧರಿಸುವ ಹಕ್ಕಿಲ್ಲ” ಎಂದು ರಿಜಿಜು ಹೇಳಿದ್ದಾರೆ.
ರಿಜಿಜು ಬೌದ್ಧ ಧರ್ಮವನ್ನು ಪಾಲಿಸುತ್ತಿದ್ದಾರೆ. ಜುಲೈ 6 ರಂದು ಧರ್ಮಶಾಲಾದಲ್ಲಿ ನಡೆಯಲಿರುವ ದಲೈ ಲಾಮಾ ಅವರ 90 ನೇ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಅವರು ಸರ್ಕಾರವನ್ನು ಪ್ರತಿನಿಧಿಸಲಿದ್ದಾರೆ.
ಟಿಬೆಟಿಯನ್ ಬೌದ್ಧರ ಆಧ್ಯಾತ್ಮಿಕ ಮುಖ್ಯಸ್ಥರಾದ 600 ವರ್ಷಗಳಷ್ಟು ಹಳೆಯದಾದ ಸಂಸ್ಥೆ ಮುಂದುವರಿಯಲಿದೆ ಎಂದು 14 ನೇ ದಲೈ ಲಾಮಾ ಟೆನ್ಜಿನ್ ಗ್ಯಾಟ್ಸೊ ಘೋಷಿಸಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.