ನವದೆಹಲಿ: ವಿಶ್ವವಿದ್ಯಾನಿಲಯ ಅನುದಾನ ಆಯೋಗ (ಯುಜಿಸಿ)ಯು ಮಹತ್ವದ ಅಧಿಸೂಚನೆಯನ್ನು ಹೊರಡಿಸಿದ್ದು, ಎಂಫಿಲ್ ಪದವಿ ಮಾನ್ಯತೆ ಪಡೆಯದ ಕೋರ್ಸ್ ಎಂದು ಸ್ಪಷ್ಟಪಡಿಸಿದೆ. ಅಲ್ಲದೇ ಇದಕ್ಕೆ ಪ್ರವೇಶ ಪಡೆಯದಂಎ ವಿದ್ಯಾರ್ಥಿಗಳನ್ನು ಎಚ್ಚರಿಸಿದೆ.
2023-24 ಶೈಕ್ಷಣಿಕ ವರ್ಷಕ್ಕೆ ಎಂಫಿಲ್ಗೆ ಪ್ರವೇಶವನ್ನು ನಿಷೇಧಿಸಲಾಗಿದೆ. ಆದರೆ, 2022 ರಲ್ಲಿ ಹೊರಡಿಸಲಾದ ಹೊಸ ನಿಯಮಗಳ ಅಧಿಸೂಚನೆಯ ದಿನಾಂಕದವರೆಗೆ ಎಂಫಿಲ್ ಪದವಿ ಮಾನ್ಯವಾಗಿರುತ್ತದೆ ಎಂದಿದೆ. ಹೊಸದಾಗಿ ಯಾರೂ ಕೋರ್ಸ್ಗೆ ನೋಂದಾಯಿಸಿಕೊಳ್ಳಬಾರದು ಎಂದು ಹೇಳಿದೆ.
ಕೆಲವು ವಿಶ್ವವಿದ್ಯಾನಿಲಯಗಳು ಎಂಫಿಲ್ (ಮಾಸ್ಟರ್ ಆಫ್ ಫಿಲಾಸಫಿ) ಕಾರ್ಯಕ್ರಮಕ್ಕಾಗಿ ಹೊಸದಾಗಿ ಅರ್ಜಿಗಳನ್ನು ಆಹ್ವಾನಿಸುತ್ತಿರುವ ಬಗ್ಗೆ ಯುಜಿಸಿ ಅಸಮಾಧಾನವನ್ನು ವ್ಯಕ್ತಪಡಿಸಿದ್ದು, ಈ ಬಗ್ಗೆ ಆಯೋಗವು ತನ್ನ ಸಾರ್ವಜನಿಕ ಪ್ರಕಟಣೆಯಲ್ಲಿ ಸ್ಪಷ್ಟನೆ ನೀಡಿದೆ. ಎಂಫಿಲ್ ಪದವಿ ಈಗ ಮಾನ್ಯತೆ ಪಡೆದ ಪದವಿಯಲ್ಲ ಎಂದಿದೆ.
ಉನ್ನತ ಶಿಕ್ಷಣ ಸಂಸ್ಥೆಗಳು ಎಂಫಿಲ್ ಕಾರ್ಯಕ್ರಮಗಳನ್ನು ನೀಡುವುದನ್ನು ನಿಷೇಧಿಸುವ UGC (ಕನಿಷ್ಠ ಮಾನದಂಡಗಳು ಮತ್ತು ಪಿಎಚ್ಡಿ ಪದವಿಯನ್ನು ನೀಡುವ ಕಾರ್ಯವಿಧಾನಗಳು) ನಿಯಮಗಳು 2022 ರ ನಿಯಮಾವಳಿ ಸಂಖ್ಯೆ 14 ಅನ್ನು ಅಧಿಸೂಚನೆಯು ಒತ್ತಿಹೇಳಿದೆ ಎಂದು UGC ಹೈಲೈಟ್ ಮಾಡಿದೆ. ಯುಜಿಸಿ ಈ ಹಿಂದೆ ಎಂಫಿಲ್ ಪದವಿಯನ್ನು ಕಾನೂನುಬಾಹಿರ ಎಂದು ಘೋಷಿಸಿತ್ತು, ಎಂಫಿಲ್ ಪದವಿ ನೀಡದಂತೆ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಸೂಚನೆ ನೀಡಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.