ನವದೆಹಲಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಇಂದು ‘ವೀರ ಬಾಲ್ ದಿವಸ್’ ಅಂಗವಾಗಿ ಸಿಖ್ ಗುರು ಗೋವಿಂದ್ ಸಿಂಗ್, ಅವರ ಪುತ್ರರು ಮತ್ತು ಪತ್ನಿ ಮಾತಾ ಗುಜ್ರಿ ಅವರಿಗೆ ಗೌರವ ನಮನ ಸಲ್ಲಿಸಿದರು.
ಡಿಸೆಂಬರ್ 26 ಅನ್ನು ‘ವೀರ್ ಬಾಲ್ ದಿವಸ್’ ಎಂದು ಆಚರಿಸಲಾಗುತ್ತದೆ, ತಮ್ಮ ನಂಬಿಕೆಯನ್ನು ರಕ್ಷಿಸುವ ಸಂದರ್ಭದಲ್ಲಿ ತಮ್ಮ ಪ್ರಾಣವನ್ನು ಅರ್ಪಿಸಿದ ಸಿಖ್ ಗುರುಗಳ ಪುತ್ರರ ಹುತಾತ್ಮತೆಯನ್ನು ಗುರುತಿಸಲು ಈ ದಿನವನ್ನು ಆಚರಿಸಲಾಗುತ್ತದೆ.
ಇವರ ಸಾಟಿಯಿಲ್ಲದ ಶೌರ್ಯವು ಮುಂದಿನ ಪೀಳಿಗೆಗೆ ಸ್ಫೂರ್ತಿ ನೀಡಲಿದೆ ಎಂದು ಅಮಿತ್ ಶಾ ಹೇಳಿದ್ದಾರೆ.
“ವೀರ್ ಬಾಲ್ ದಿವಸ್ ಸಂದರ್ಭದಲ್ಲಿ ನಾನು ಗುರು ಗೋಬಿಂದ್ ಸಿಂಗ್ ಜಿಯವರ ನಾಲ್ಕು ಸಾಹಿಬ್ಜಾದೆ ಮತ್ತು ಮಾತಾ ಗುಜ್ರಿ ಜಿ ಅವರಿಗೆ ನಮಸ್ಕರಿಸುತ್ತೇನೆ. ಅವರು ಅತ್ಯಂತ ಧೈರ್ಯದಿಂದ ಕ್ರೂರ ಮೊಘಲ್ ಆಳ್ವಿಕೆಯ ವಿರುದ್ಧ ಎದೆಗೊಟ್ಟು ನಿಂತರು ಮತ್ತು ಹುತಾತ್ಮರಾದರು. ಮತಾಂತರಗೊಳ್ಳಲು ನಿರಾಕರಿಸಿ ಮಾದರಿಯಾದರು. ಅವರ ಸಾಟಿಯಿಲ್ಲದ ಶೌರ್ಯವು ಮುಂದಿನ ಪೀಳಿಗೆಗೆ ಸ್ಫೂರ್ತಿ ನೀಡುತ್ತಲೇ ಇರುತ್ತದೆ” ಎಂದು ಅಮಿತ್ ಶಾ’X’ ನಲ್ಲಿ ಪೋಸ್ಟ್ ಮಾಡಿದ್ದಾರೆ.
On Veer Bal Diwas, I bow to Guru Gobind Singh Ji’s four Sahibzade and Mata Gujri Ji. With supreme courage they stood against the brutal Mughal rule and chose martyrdom, refusing to convert. Their unmatched valor will continue to inspire generations to come.
Proclaiming their… pic.twitter.com/1YtlM0GoCo— Amit Shah (@AmitShah) December 26, 2023
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.