ಕ್ಯಾಲಿಫೋರ್ನಿಯಾ: ಕ್ಯಾಲಿಫೋರ್ನಿಯಾದ ಹಿಂದೂ ದೇವಾಲಯದ ಗೋಡೆಗಳ ಮೇಲೆ ಖಲಿಸ್ತಾನ್ ಪರ ಮತ್ತು ಭಾರತ ವಿರೋಧಿ ಘೋಷಣೆಗಳನ್ನು ಬರೆದು ವಿರೂಪಗೊಳಿಸಲಾಗಿದೆ. ನೆವಾರ್ಕ್ನ ಸ್ವಾಮಿನಾರಾಯಣ ಮಂದಿರ ವಸನಾ ಸಂಸ್ಥೆಯನ್ನು ವಿರೂಪಗೊಳಿಸಿದ ಫೋಟೋಗಳನ್ನು ಹಿಂದೂ-ಅಮೆರಿಕನ್ ಫೌಂಡೇಶನ್ X ನಲ್ಲಿ ಹಂಚಿಕೊಂಡಿದೆ. ಈ ಚಿತ್ರಗಳು ದೇವಾಲಯದ ಹಲವಾರು ಗೋಡೆಗಳ ಮೇಲೆ ಭಾರತ ಮತ್ತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಘೋಷಣೆಗಳನ್ನು ಬರೆದಿರುವುದನ್ನು ತೋರಿಸಿವೆ. ದೇವಾಲಯಕ್ಕೆ ಭೇಟಿ ನೀಡುವ ಜನರಿಗೆ ಆತಂಕ ಮೂಡಿಸಲು ಮತ್ತು ಹಿಂಸಾಚಾರದ ಭಯ ಮೂಡಿಸಲು ದ್ವೇಷಪೂರಿತ ಸಂದೇಶಗಳನ್ನು ಬರೆಯಲಾಗಿದೆ ಎಂದು ಸಂಘಟನೆ ಹೇಳಿದೆ.
ನೆವಾರ್ಕ್ ಪೊಲೀಸ್ ಇಲಾಖೆ ಮತ್ತು ನ್ಯಾಯಾಂಗ ಇಲಾಖೆ ನಾಗರಿಕ ಹಕ್ಕುಗಳ ವಿಭಾಗದಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ಘಟನೆಯನ್ನು ಭಾರತ ತೀವ್ರವಾಗಿ ಖಂಡಿಸಿದ್ದು, ಶೀಘ್ರ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದೆ.
“ಕ್ಯಾಲಿಫೋರ್ನಿಯಾದ ನೆವಾರ್ಕ್ನಲ್ಲಿರುವ ಎಸ್ಎಂವಿಎಸ್ ಶ್ರೀ ಸ್ವಾಮಿನಾರಾಯಣ ಮಂದಿರವನ್ನು ಭಾರತ ವಿರೋಧಿ ಬರಹದ ಮೂಲಕ ವಿರೂಪಗೊಳಿಸಿರುವುದನ್ನು ನಾವು ಬಲವಾಗಿ ಖಂಡಿಸುತ್ತೇವೆ. ಈ ಘಟನೆಯು ಭಾರತೀಯ ಸಮುದಾಯದ ಭಾವನೆಗಳಿಗೆ ಧಕ್ಕೆ ತಂದಿದೆ. ತ್ವರಿತ ತನಿಖೆ ಮತ್ತು ವಿಧ್ವಂಸಕರ ವಿರುದ್ಧ ಯುಎಸ್ ಅಧಿಕಾರಿಗಳಿಂದ ತ್ವರಿತ ಕ್ರಮಕ್ಕಾಗಿ ನಾವು ಒತ್ತಾಯಿಸಿದ್ದೇವೆ” ಎಂದು ಭಾರತೀಯ ರಾಯಭಾರ ಕಚೇರಿ ಎಕ್ಸ್ನಲ್ಲಿ ಹೇಳಿದೆ.
ಹಿಂದೂ ದೇವಾಲಯವನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿರುವುದು ಇದೇ ಮೊದಲಲ್ಲ, ಈ ಹಿಂದೆಯೂ ಇದೇ ರೀತಿಯ ಘಟನೆಗಳು ಯುಎಸ್ ಮತ್ತು ಅದರ ನೆರೆಯ ಕೆನಡಾದಲ್ಲಿ ಸಂಭವಿಸಿವೆ. ಖಲಿಸ್ತಾನ್ ಬೆಂಬಲಿಗರಿಂದ ಹೆಚ್ಚುತ್ತಿರುವ ಚಟುವಟಿಕೆಗಳ ಬಗ್ಗೆ ಭಾರತವು ಈ ಹಿಂದೆ ಕಳವಳ ವ್ಯಕ್ತಪಡಿಸಿದೆ. ಆದರೂ ಅಲ್ಲಿನ ಸರ್ಕಾರದ ನಿರ್ಲಕ್ಷ್ಯದಿಂದಾಗಿ ಭಾರತ ವಿರೋಧಿಗಳ ಕೃತ್ಯಗಳು ದಿನೇ ದಿನೇ ಹೆಚ್ಚುತ್ತಿದೆ.
We strongly condemn the defacing of SMVS Shri Swaminarayan Mandir at Newark, California with anti-India graffiti. This incident has hurt the sentiments of the Indian community. We have pressed for quick investigation and prompt action against the vandals by the US authorities in…
— India in SF (@CGISFO) December 23, 2023
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.