ನವದೆಹಲಿ: ಅಯೋಧ್ಯೆಯಲ್ಲಿ ಮರ್ಯಾದಾ ಪುರುಷೋತ್ತಮ ಶ್ರೀ ರಾಮ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ಮಾಣ ಕಾರ್ಯವು ಪೂರ್ಣಗೊಳ್ಳುತ್ತಿದ್ದಂತೆ, ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯವು ಅಯೋಧ್ಯೆ ವಿಮಾನ ನಿಲ್ದಾಣಕ್ಕೆ ಸಾರ್ವಜನಿಕ ಬಳಕೆಯ ವಿಭಾಗದಲ್ಲಿ ‘ಎಲ್ಲಾ ಹವಾಮಾನ ಪರಿಸ್ಥಿತಿಗಳು’ ಏರೋಡ್ರೋಮ್ ಪರವಾನಗಿಯನ್ನು ನೀಡಿದೆ.
ಅಯೋಧ್ಯಾ ವಿಮಾನನಿಲ್ದಾಣವು ಉದ್ಘಾಟನಾ ವಿಮಾನವನ್ನು ಡಿಸೆಂಬರ್ 30ರಂದು ನೋಡಲಿದೆ. ಉದ್ಘಾಟನಾ ವಿಮಾನವು ಇಲ್ಲಿಂದ ಟೇಕ್ ಆಫ್ ಆಗಲಿದ್ದು, ಸಾಮಾನ್ಯ ವಿಮಾನಗಳು ಜನವರಿ 6 ರಿಂದ ಪ್ರಾರಂಭವಾಗುತ್ತವೆ.
“ಮುಂಬರುವ ಅಯೋಧ್ಯೆ ವಿಮಾನ ನಿಲ್ದಾಣಕ್ಕೆ ಎಲ್ಲಾ ಹವಾಮಾನ ಪರಿಸ್ಥಿತಿಗಳಿಗಾಗಿ ಸಾರ್ವಜನಿಕ ಬಳಕೆಯ ವಿಭಾಗದಲ್ಲಿ ಏರೋಡ್ರೋಮ್ ಪರವಾನಗಿ ನೀಡಲಾಗಿದೆ. AAI ಅಧ್ಯಕ್ಷ ಸಂಜೀವ್ ಕುಮಾರ್ ಅವರು ಡಿಜಿಸಿಎಯ ಡಿಜಿ ವಿಕ್ರಮ್ ದೇವ್ ದತ್ ಅವರಿಂದ ಪರವಾನಗಿ ಸ್ವೀಕರಿಸಿದರು”ಎಂದು ಏರ್ಪೋರ್ಟ್ ಅಥಾರಿಟಿ ಆಫ್ ಇಂಡಿಯಾದ (AAI) ಸಾಮಾಜಿಕ ಮಾಧ್ಯಮ ವೇದಿಕೆ ‘X’ ನಲ್ಲಿ ಪೋಸ್ಟ್ ಮಾಡಿದೆ.
350 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ವಿಮಾನ ನಿಲ್ದಾಣದಿಂದ ದೇಶದ ವಿವಿಧ ಭಾಗಗಳಿಂದ ರಾಮಮಂದಿರಕ್ಕೆ ಭೇಟಿ ನೀಡಲು ಬರುವ ಯಾತ್ರಾರ್ಥಿಗಳಿಗೆ ಅನುಕೂಲವಾಗಲಿದೆ. ಇನ್ನೊಂದೆಡೆ ರಾಮ ಮಂದಿರ ನಿರ್ಮಾಣವು ಸಹ ಪೂರ್ಣಗೊಳ್ಳುತ್ತಿದೆ.
ಅಯೋಧ್ಯೆ ಜಿಲ್ಲಾ ಮ್ಯಾಜಿಸ್ಟ್ರೇಟ್ ನಿತೀಶ್ ಕುಮಾರ್ ಅವರು, “ಟರ್ಮಿನಲ್ ಕಟ್ಟಡ ಸೇರಿದಂತೆ ವಿಮಾನ ನಿಲ್ದಾಣದ ಹಂತ-1 ಬಹುತೇಕ ಪೂರ್ಣಗೊಂಡಿದೆ. ಏರ್ಸ್ಟ್ರಿಪ್ ಮತ್ತು ರಾತ್ರಿ ಲ್ಯಾಂಡಿಂಗ್ ಸೌಲಭ್ಯದ ನಿರ್ಮಾಣವೂ ಪೂರ್ಣಗೊಂಡಿದೆ. ಉದ್ಘಾಟನೆ ಸನ್ನಿಹಿತವಾಗಿದೆ” ಎಂದಿದ್ದಾರೆ.
ಮರ್ಯಾದಾ ಪುರಷೋತ್ತಮ ಶ್ರೀ ರಾಮ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಎಂದು ಕರೆಯಲ್ಪಡುವ ಇನ್ನೂ ಉದ್ಘಾಟನೆಗೊಳ್ಳದ ವಿಮಾನ ನಿಲ್ದಾಣದಲ್ಲಿನ ಪ್ರಯಾಣಿಕರ ಟರ್ಮಿನಲ್ ಕಟ್ಟಡವು ಪೀಕ್ ಅವರ್ಗಳಲ್ಲಿ 500 ಪ್ರಯಾಣಿಕರಿಗೆ ಅವಕಾಶ ಕಲ್ಪಿಸುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.