ಟೆಲ್ ಅವಿವ್: ಅಕ್ಟೋಬರ್ 7 ರಂದು ಇಸ್ರೇಲ್ ಮೇಲೆ ಬೃಹತ್ ದಾಳಿ ನಡೆಸಿದ್ದ ಪ್ಯಾಲೆಸ್ಟೈನ್ ಗುಂಪು ಹಮಾಸ್ ವಿರುದ್ಧದ ಸಮರವನ್ನು ಇಸ್ರೇಲ್ ಇನ್ನೂ ಮುಂದುವರೆಸಿದೆ. ಗಾಜಾದ ಮೇಲೆ ಇಸ್ರೇಲ್ನ ಬಾಂಬ್ ದಾಳಿ ಮುಂದುವರೆದಿದೆ. ಹಮಾಸ್ ಅನ್ನು ಬೇರುಸಹಿತ ಕಿತ್ತೊಗೆಯುವುದಾಗಿ ಪ್ರತಿಜ್ಞೆ ಮಾಡಿರುವ ಇಸ್ರೇಲಿನ ರಕ್ಷಣಾ ಪಡೆಗಳು ಕಳೆದ ಮೂರು ತಿಂಗಳಿನಿಂದ ಭೂಮಿ, ಸಮುದ್ರ ಮತ್ತು ವಾಯು ದಾಳಿ ನಡೆಯುತ್ತಿದೆ ಮತ್ತು ಈ ದಾಳಿಗಳ ಕಾರಣದಿಂದ ಗಾಜಾದಲ್ಲಿ 18,500 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ.
ಈ ನಡುವೆಯೇ ಹಮಾಸ್ ತನ್ನ 36 ನೇ ಸಂಸ್ಥಾಪನಾ ದಿನವನ್ನು ಆಚರಿಸಿಕೊಳ್ಳುತ್ತಿದೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಇಸ್ರೇಲ್, ಇದುವೇ ಅದರ ಕೊನೆಯ ಜನ್ಮದಿನ ಎಂದು ಹೇಳಿದೆ.
X ನಲ್ಲಿ ಪೋಸ್ಟ್ ಮಾಡಿರುವ ಇಸ್ರೇಲ್, “ಹಮಾಸ್ ಅನ್ನು 36 ವರ್ಷಗಳ ಹಿಂದೆ ಸ್ಥಾಪಿಸಲಾಯಿತು. ಈ ಜನ್ಮದಿನವು ಅದರ ಕೊನೆಯದಾಗಿರಲಿ” ಎಂದು ಹೇಳಿದೆ. ಅಲ್ಲದೇ ಕ್ಯಾಂಡಲ್ ಬದಲಿಗೆ ರಾಕೆಟ್ಗಳನ್ನು ಇಟ್ಟು ಪೋಸ್ಟ್ ಮಾಡಿದೆ. ಗಾಜಾವನ್ನು ಹಮಾಸ್ನಿಂದ ಮುಕ್ತಗೊಳಿಸಲು ಕರೆ ನೀಡಿದೆ.
ಇನ್ನೊಂದೆಡೆ ಗಾಜಾದಲ್ಲಿ ಜನರು ಆಹಾರಕ್ಕಾಗಿ ಭಿಕ್ಷೆ ಬೇಡುತ್ತಿದ್ದಾರೆ, ಒಂದು ಡಬ್ಬಿ ಆಹಾರಕ್ಕೆ ಸಾಮಾನ್ಯಕ್ಕಿಂತ 50 ಪಟ್ಟು ಹೆಚ್ಚು ಪಾವತಿಸುತ್ತಿದ್ದಾರೆ ಮತ್ತು ಮೂರು ತಿಂಗಳ ನಿರಂತರ ಬಾಂಬ್ ದಾಳಿಯು ದೈನಂದಿನ ಜೀವನವನ್ನು ದುರ್ಬಲಗೊಳಿಸಿರುವುದರಿಂದ ಮತ್ತು ಇಸ್ರೇಲ್ನ ಭರವಸೆಗಳ ಹೊರತಾಗಿಯೂ ವೈದ್ಯಕೀಯ ಮತ್ತು ಆಹಾರ ಸಹಾಯವು ಕೆಟ್ಟದಾಗಿ ಹಾನಿಗೊಳಗಾಗಿರುವುದರಿಂದ ತಮ್ಮ ಕುಟುಂಬಗಳನ್ನು ಪೋಷಿಸಲು ಕತ್ತೆಗಳನ್ನು ಕಡಿಯುತ್ತಿದ್ದಾರೆ ಎಂದು ವರದಿಗಳು ತಿಳಿಸಿವೆ.
Hamas was founded 36 years ago today.
May this birthday be its last. #FreeGazaFromHamas pic.twitter.com/wsT6QWG1i1
— Israel ישראל (@Israel) December 14, 2023
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.