ಶ್ರೀನಗರ: ಗೃಹ ಸಚಿವ ಅಮಿತ್ ಶಾ ಅವರು “ಪಿಒಕೆ ನಮ್ಮದು” ಎಂದು ಸಂಸತ್ತಿನಲ್ಲಿ ಹೇಳಿಕೆ ನೀಡಿದ ಒಂದು ದಿನದ ನಂತರ ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ) ಅಧಿಕಾರಿಗಳು ಶಾರದಾ ಪೀಠದ ಹಾನಿಗೊಳಗಾದ ಗಡಿ ಗೋಡೆಯನ್ನು ಸರಿಪಡಿಸಲು ಪ್ರಾರಂಭಿಸಿದ್ದಾರೆ ಎಂದು ವರದಿಗಳು ತಿಳಿಸಿವೆ.
ಕಾಶ್ಮೀರಿ ಪಂಡಿತರು ಶಾರದಾ ಪೀಠದ ಸಮಸ್ಯೆಯನ್ನು ಪಿಒಕೆ ಸಿವಿಲ್ ಆಡಳಿತದೊಂದಿಗೆ ಪ್ರಸ್ತಾಪಿಸಿದ್ದಾರೆ ಮತ್ತು ಶಾರದಾ ಪೀಠದ ಹಾನಿಗೊಳಗಾದ ಗಡಿ ಗೋಡೆಯನ್ನು ಸರಿಪಡಿಸುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆ ಎಂದು ಹೇಳಲಾಗಿದೆ.
ಪಿಒಕೆಯ ನೀಲಂ ಕಣಿವೆಯಲ್ಲಿರುವ ಶಾರದಾ ಪೀಠ ದೇವಾಲಯವು ಪುರಾತನ ದೇವಾಲಯವಾಗಿದೆ ಮತ್ತು ಪ್ರಾಚೀನ ಕಾಲದಲ್ಲಿ ಕಲಿಕೆಯ ಅತ್ಯುನ್ನತ ಕೇಂದ್ರವಾಗಿತ್ತು. ಹಿಂದೂ ವಿದ್ಯಾ ದೇವತೆ ಶಾದರೆಗೆ ಸಮರ್ಪಿತವಾಗಿರುವ, 5,000 ವರ್ಷಗಳಷ್ಟು ಹಳೆಯದಾದ ಶಾರದಾ ಪೀಠವು ಕ್ರಮೇಣ ಶಿಥಿಲಾವಸ್ಥೆ ತಲುಪಿದೆ.
ಅಶೋಕನ ಆಳ್ವಿಕೆಯಲ್ಲಿ 237 BC ಯಲ್ಲಿ ಸ್ಥಾಪಿಸಲಾದ ಪ್ರಾಚೀನ ದೇವಾಲಯವು 6 ನೇ ಮತ್ತು 12 ನೇ ಶತಮಾನದ CE ನಡುವೆ ಭಾರತೀಯ ಉಪಖಂಡದ ಅಗ್ರಗಣ್ಯ ದೇವಾಲಯ ವಿಶ್ವವಿದ್ಯಾಲಯಗಳಲ್ಲಿ ಒಂದಾಗಿದೆ. ಇದು ಕಾಶ್ಮೀರಿ ಪಂಡಿತರ ಮೂರು ಪ್ರಸಿದ್ಧ ಪವಿತ್ರ ಸ್ಥಳಗಳಲ್ಲಿ ಒಂದಾಗಿದೆ, ಇತರ ಎರಡು ಪವಿತ್ರ ಯಾತ್ರಸ್ಥಳಗಳೆಂದರೆ ಅನಂತನಾಗ್ನಲ್ಲಿರುವ ಮಾರ್ತಾಂಡ್ ಸೂರ್ಯ ದೇವಾಲಯ ಮತ್ತು ಅಮರನಾಥ ದೇವಾಲಯ.
ಈ ದೇವಾಲಯವನ್ನು ಹಿಂದಿನ ಜಮ್ಮು ಮತ್ತು ಕಾಶ್ಮೀರ ರಾಜ್ಯವನ್ನು ವಿಭಜಿಸುವ ಎಲ್ಒಸಿಯ ಉದ್ದಕ್ಕೂ ಕಿಶನ್ಗಂಗಾ ನದಿಯ ದಡದಲ್ಲಿ ನಿರ್ಮಿಸಲಾಗಿದೆ. ಇದು ನೀಲಂ ಕಣಿವೆಯಲ್ಲಿ ಪಿಒಕೆಯ ಎಲ್ಒಸಿಯಾದ್ಯಂತ ಇದೆ.
ಕ್ರಮೇಣ ಪಾಕಿಸ್ತಾನಿ ಸೇನೆಯು ಶಾರದಾ ಪೀಠದ ಭೂಮಿಯನ್ನು ಅತಿಕ್ರಮಿಸಲು ಮತ್ತು ದೇವಾಲಯದ ಆವರಣವನ್ನು ಹಾನಿ ಮಾಡಲು ಸ್ಥಳೀಯರಿಗೆ ಕುಮ್ಮಕ್ಕು ನೀಡುತ್ತಾ ಬಂದಿತ್ತು.
ಇತ್ತೀಚೆಗಿನ ಬೆಳವಣಿಗೆಯಲ್ಲಿ ಪಾಕಿಸ್ತಾನಿ ಸೇನೆ ದೇವಸ್ಥಾನದ ಬಳಿ ಕಾಫಿ ಹೌಸ್ ನಿರ್ಮಿಸಿದೆ ಎಂದು ಹೇಳಲಾಗಿದೆ.
ಎಲ್ಒಸಿಯ ಎರಡೂ ಕಡೆಯ ಸದಸ್ಯರನ್ನು ಹೊಂದಿರುವ ʼಸೇವ್ ಶಾರದ ಕಮಿಟಿʼಯು ನೀಲಂ ಕಣಿವೆಯ ಜಿಲ್ಲಾ ಅಧಿಕಾರಿಗಳಿಗೆ ಪತ್ರ ಬರೆದು ದೇವಾಲಯವನ್ನು ರಕ್ಷಿಸಬೇಕು ಮತ್ತು ಅತಿಕ್ರಮಣಗಳನ್ನು ತಡೆಯಬೇಕು ಎಂದು ಒತ್ತಾಯಿಸಿದೆ.
ಕಂದಾಯ ದಾಖಲೆಗಳ ಪ್ರಕಾರ ದೇವಾಲಯವು 73 ಕಾಲುವೆಗಳ ಭೂಮಿಯನ್ನು ಹೊಂದಿದೆ ಆದರೆ ಈವರೆಗೆ ಕೇವಲ 10 ಕಾಲುವೆಗಳು ಮಾತ್ರ ದೇವಾಲಯದಲ್ಲಿದ್ದು, ಉಳಿದವುಗಳನ್ನು ಒತ್ತುವರಿ ಮಾಡಲಾಗಿದೆ. ಹಲವು ವರ್ಷಗಳಿಂದ, ಕಾಶ್ಮೀರಿ ಪಂಡಿತರು ದೇವಾಲಯಕ್ಕೆ ಭೇಟಿ ನೀಡಲು ಮತ್ತು ಆವರಣವನ್ನು ರಕ್ಷಿಸಲು ಅವಕಾಶ ನೀಡಬೇಕೆಂದು ಒತ್ತಾಯಿಸುತ್ತಲೇ ಬಂದಿದ್ದಾರೆ.
ಈ ನಡುವೆ, ಸೋಮವಾರ ಲೋಕಸಭೆಯಲ್ಲಿ ಗೃಹ ಸಚಿವ ಅಮಿತ್ ಶಾ ಅವರು ಪಿಒಕೆ ನಮ್ಮದು ಎಂದು ಸಂಸತ್ತಿನಲ್ಲಿ ಗಟ್ಟಿ ಧ್ವನಿಯಲ್ಲಿ ಹೇಳಿದ್ದರು, ಅಲ್ಲದೇ 24 ಅಸೆಂಬ್ಲಿ ಸ್ಥಾನಗಳನ್ನು ಪಿಒಕೆಗೆ ಮೀಸಲಿಡಲಾಗಿದೆ ಎಂದಿದ್ದರು.
ಈ ಹಿಂದೆ ಜಮ್ಮುವಿನಲ್ಲಿ 37 ಸ್ಥಾನಗಳಿದ್ದವು ಆದರೆ ಈಗ ರಾಜ್ಯ ವಿಧಾನಸಭೆಯಲ್ಲಿ 43 ಸ್ಥಾನಗಳನ್ನು ನೀಡಲಾದೆ. 46 ಸ್ಥಾನಗಳನ್ನು ಹೊಂದಿದ್ದ ಕಾಶ್ಮೀರದಲ್ಲಿ ಈಗ 47 ಸ್ಥಾನಗಳು ಮತ್ತು 24 ಸ್ಥಾನಗಳನ್ನು ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಮೀಸಲಿಡಲಾಗಿದೆ, ಏಕೆಂದರೆ ಅದು ನಮ್ಮದು ಎಂದು ಅಮಿತ್ ಶಾ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.