ನವದೆಹಲಿ: ಏರ್ ಇಂಡಿಯಾ ಇಂದು ತನ್ನ ಪೈಲಟ್ ಮತ್ತು ಸಿಬ್ಬಂದಿಗೆ ಹೊಸ ಸಮವಸ್ತ್ರವನ್ನು ಅನಾವರಣಗೊಳಿಸಿದೆ. 1932 ರಲ್ಲಿ ಸ್ಥಾಪನೆಯಾದ ನಂತರ ಆರು ದಶಕಗಳಲ್ಲೇ ಮೊದಲ ಬಾರಿಗೆ ಏರ್ಲೈನ್ ತನ್ನ ಸಿಬ್ಬಂದಿಯ ಸಮವಸ್ತ್ರವನ್ನು ಬದಲಾಯಿಸಿದೆ. ವಿಲೀನದ ಮೂಲಕ ವಿಸ್ತಾರಾವನ್ನು ತನ್ನ ತೆಕ್ಕೆಗೆ ತರುವ ಸಮಯದಲ್ಲೇ ಸಮವಸ್ತ್ರವನ್ನು ಅದು ಬದಲಾಯಿಸಿದೆ.
ಈ ವರ್ಷದ ಅಂತ್ಯದ ವೇಳೆಗೆ ಹೊರತರಲಿರುವ ಈ ಹೊಸ ಸಮವಸ್ತ್ರವು “ಏರ್ ಇಂಡಿಯಾದ ಶ್ರೀಮಂತ ಇತಿಹಾಸದ ಸಂಕೇತವಾಗಿದೆ ಮತ್ತು ಉಜ್ವಲ ಭವಿಷ್ಯದ ಭರವಸೆಯಾಗಿದೆ” ಎಂದು ಏರ್ಲೈನ್ ಎಕ್ಸ್ನಲ್ಲಿ ಪೋಸ್ಟ್ನಲ್ಲಿ ತಿಳಿಸಿದೆ.
ವಿಮಾನಯಾನ ಸಂಸ್ಥೆಯು ತನ್ನ 10,000 ಕ್ಕೂ ಹೆಚ್ಚು ವಿಮಾನ ಸಿಬ್ಬಂದಿ, ನೆಲದ ಸಿಬ್ಬಂದಿ ಮತ್ತು ಭದ್ರತಾ ಸಿಬ್ಬಂದಿಗೆ ಕೆಂಪು, ಪರ್ಪಲ್, ಚಿನ್ನದ ಬಣ್ಣದಲ್ಲಿ ಹೊಸ ಸಮವಸ್ತ್ರವನ್ನು ವಿನ್ಯಾಸಗೊಳಿಸಲು ಫ್ಯಾಷನ್ ಡಿಸೈನರ್ ಮನೀಶ್ ಮಲ್ಹೋತ್ರಾ ಅವರನ್ನು ಸಂಪರ್ಕಿಸಿದೆ. ಈ ಸಮವಸ್ತ್ರ ವಿಶ್ವಾಸ, ವೈಬ್ರೆಂಟ್ ಭಾರತವನ್ನು ಪ್ರತಿನಿಧಿಸುತ್ತದೆ ಎಂದು ಅದು ಹೇಳಿದೆ.
ಏರ್ ಇಂಡಿಯಾದ ಅಧಿಕೃತ X ಖಾತೆಯಲ್ಲಿ ಪೋಸ್ಟ್ ಮಾಡಿದ ವೀಡಿಯೊದಲ್ಲಿ, ಸಿಬ್ಬಂದಿ ಸದಸ್ಯರು ಹೊಸ ಸಮವಸ್ತ್ರವನ್ನು ಧರಿಸಿರುವುದನ್ನು ಕಾಣಬಹುದು.
“ನಮ್ಮ ಪೈಲಟ್ ಮತ್ತು ಕ್ಯಾಬಿನ್ ಸಿಬ್ಬಂದಿಗೆ ಹೊಸ ಸಮವಸ್ತ್ರಗಳನ್ನು ಪರಿಚಯಿಸುತ್ತಿದ್ದೇವೆ, ಏರ್ ಇಂಡಿಯಾದ ಶ್ರೀಮಂತ ಇತಿಹಾಸದ ಮತ್ತು ಉಜ್ವಲ ಭವಿಷ್ಯದ ಭರವಸೆಯ ಸಂಕೇತ ಇದಾಗಲಿದೆ. ಭಾರತದ ಪ್ರಮುಖ ವಸ್ತ್ರ ವಿನ್ಯಾಸಕ ಮನೀಶ್ ಮಲ್ಹೋತ್ರಾ ಅವರು ರೂಪಿಸಿದ ಈ ಸಮವಸ್ತ್ರಗಳು ಮೂರು ಸರ್ವೋತ್ಕೃಷ್ಟ ಭಾರತೀಯ ಬಣ್ಣಗಳಾದ ಕೆಂಪು, ಪರ್ಪಲ್ ಮತ್ತು ಚಿನ್ನವನ್ನು ಒಳಗೊಂಡಿದೆ. ಆತ್ಮವಿಶ್ವಾಸ, ರೋಮಾಂಚಕ ನವ ಭಾರತವನ್ನು ಪ್ರತಿನಿಧಿಸುತ್ತದೆ” ಎಂದು ಏರ್ಲೈನ್ಸ್ ಎಕ್ಸ್ನಲ್ಲಿ ಬರೆದಿದೆ.
Introducing our new Pilot & Cabin crew uniforms, an ode to Air India’s rich history and a promise of a bright future.
These uniforms, envisioned by India’s leading couturier @ManishMalhotra, features three quintessential Indian colours – red, aubergine and gold, representing the… pic.twitter.com/Pt1YBdJlMN
— Air India (@airindia) December 12, 2023
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.