ನ್ಯೂಯಾರ್ಕ್: ಯುಎಸ್ ಮಾರುಕಟ್ಟೆಯ ಆಯ್ದ ಮಳಿಗೆಗಳಲ್ಲಿ ಮೊದಲ ಮೇಡ್ ಇನ್ ಇಂಡಿಯಾ ಬೈಸಿಕಲ್ಗಳು ಲಭ್ಯವಿರುತ್ತವೆ ಎಂದು ವಾಲ್ಮಾರ್ಟ್ ಮಂಗಳವಾರ ಪ್ರಕಟಿಸಿದೆ.
ಅಮೆರಿಕದಲ್ಲಿರುವ ಭಾರತದ ರಾಯಭಾರಿ ತರಂಜಿತ್ ಸಿಂಗ್ ಸಂಧು ಅವರು ಅಮೆರಿಕದ ವಾಲ್ಮಾರ್ಟ್ನಲ್ಲಿ ಮೇಡ್-ಇನ್-ಇಂಡಿಯಾ ಬೈಸಿಕಲ್ಗಳನ್ನು ಬಿಡುಗಡೆ ಮಾಡಿರುವ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ ಮತ್ತು ಸಂತೋಷವನ್ನುಹಂಚಿಕೊಂಡಿದ್ದಾರೆ.
ನೀಲಿ ಬಣ್ಣದ ಸೈಕಲ್ನ ಫೋಟೋವನ್ನು ʼಎಕ್ಸ್ʼ ಪೋಸ್ಟ್ ಮಾಡಿರುವ ಸಂಧು, “ಮೇಕ್ ಇನ್ ಇಂಡಿಯಾ, ಮೇಕ್ ಫಾರ್ ದಿ ವರ್ಲ್ಡ್! ಲೂಧಿಯಾನದ ಹೀರೋ ಸೈಕಲ್ಸ್ ತಯಾರಿಸಿದ ಬೈಸಿಕಲ್ಗಳು ವಾಲ್ಮಾರ್ಟ್ನಲ್ಲಿ ಬಿಡುಗಡೆಯಾಗಿರುವುದನ್ನು ವೀಕ್ಷಿಸಲು ಸಂತೋಷವಾಗುತ್ತಿದೆ” ಎಂದಿದ್ದಾರೆ.
ಕ್ರಿಸ್ಮಸ್ ರಜೆಯ ಸಮಯದಲ್ಲಿಯೇ ಮೊದಲ ಮೇಡ್-ಇನ್-ಇಂಡಿಯಾ ಬೈಸಿಕಲ್ಗಳು ಯುಎಸ್ ಮಾರುಕಟ್ಟೆಯಲ್ಲಿ ಆಯ್ದ ಮಳಿಗೆಗಳನ್ನು ತಲುಪಲಿವೆ ಎಂದು ವಾಲ್ಮಾರ್ಟ್ ಮಂಗಳವಾರ ಪ್ರಕಟಿಸಿದೆ. ಈ ಉಪಕ್ರಮವು 2027 ರ ವೇಳೆಗೆ ವಾರ್ಷಿಕವಾಗಿ $10 ಬಿಲಿಯನ್ಗೆ ಮೂರು ಪಟ್ಟು ರಫ್ತು ಮಾಡುವ ವಾಲ್ಮಾರ್ಟ್ನ ಬದ್ಧತೆಯ ಭಾಗವಾಗಿದೆ.
ಭಾರತದ ಬೈಸಿಕಲ್ ತಯಾರಕರಲ್ಲಿ ಒಬ್ಬರಾದ ಹೀರೋ ಇಕೋಟೆಕ್ ವಾಲ್ಮಾರ್ಟ್ಗಾಗಿ “ಕ್ರೂಸರ್-ಶೈಲಿಯ” ಬೈಸಿಲ್ ಅನ್ನು ವಿನ್ಯಾಸಗೊಳಿಸಿದ್ದು, ಕಾಂಕಾರ್ಡ್ ಬ್ರಾಂಡ್ ಪುರುಷರು ಮತ್ತು ಮಹಿಳೆಯರ ಆವೃತ್ತಿಗಳಲ್ಲಿ ಲಭ್ಯವಿದೆ.
Make in India, Make for the World!
Delighted to witness the launch of Walmart 🇺🇸 first made in 🇮🇳 bicycles, manufactured by #HeroCycles #Ludhiana. pic.twitter.com/DMYVpt46DF
— Taranjit Singh Sandhu (@SandhuTaranjitS) December 12, 2023
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.