ತಂಜಾಪೂರು: ಅಮೇರಿಕನ್ ನಟರಾದ ಮೈಕೆಲ್ ಡೌಗ್ಲಾಸ್ ಮತ್ತು ಕ್ಯಾಥರೀನ್ ಝೀಟಾ-ಜೋನ್ಸ್ ಅವರು ತಮ್ಮ ಮಗ ಡೈಲನ್ ಜೊತೆಗೆ ಭಾರತ ಪ್ರವಾಸಕೈಗೊಂಡಿದ್ದಾರೆ. ಗೋವಾದಲ್ಲಿ ನಡೆದ 54 ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಭಾಗಿಯಾಗಲು ಇವರು ಭಾರತಕ್ಕೆ ಆಗಮಿಸಿದ್ದರು, ಅಲ್ಲಿ ಅವರು ಚಲನಚಿತ್ರದಲ್ಲಿನ ಶ್ರೇಷ್ಠತೆಗಾಗಿ ಗೌರವಾನ್ವಿತ ಸತ್ಯಜಿತ್ ರೇ ಜೀವಮಾನ ಸಾಧನೆ ಪ್ರಶಸ್ತಿಯನ್ನು ಪಡೆದರು. ನಂತರ ತಮಿಳುನಾಡಿನ ತಂಜಾವೂರಿಗೆ ತೆರಳಿದ ಕುಟುಂಬ ಅಲ್ಲಿನ ಸೌಂದರ್ಯವನ್ನು ಕಣ್ತುಂಬಿಕೊಂಡರು.
ಡೌಗ್ಲಾಸ್ ಅವರು ತಮ್ಮ ಕುಟುಂಬದೊಂದಿಗೆ ಬೃಹದೀಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ ಸಂದರ್ಭದ ತುಣುಕುಗಳನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.”ಉತ್ತಮವಾದ ದೃಶ್ಯವೀಕ್ಷಣೆ” ಎಂದು ತಮ್ಮ ಫೋಟೋಗೆ ಒಕ್ಕಣೆ ಬರೆದಿದ್ದಾರೆ. 79 ವರ್ಷದ ನಟ ಪ್ರಾರ್ಥನೆ ಸಲ್ಲಿಸಿದ ನಂತರ ದೇವಾಲಯದ ಒಳಗಿನ ವಿಹಂಗಮ ನೋಟದ ಫೋಟೋವನ್ನು ಹಂಚಿಕೊಂಡಿದ್ದಾರೆ. ಈ ಮೂವರೂ ಕೊರಳಲ್ಲಿ ಹೂವಿನ ಹಾರ ಹಾಕಿಕೊಂಡು ಪೋಸ್ ಕೊಡುವುದನ್ನು ಫೋಟೋದಲ್ಲಿ ಕಾಣಬಹುದು.
ಈ ಪೋಸ್ಟ್ ಪ್ರಧಾನಿ ನರೇಂದ್ರ ಮೋದಿಯವರ ಗಮನ ಸೆಳೆದಿದೆ. ಅವರು ಡೌಗ್ಲಾಸ್ ಅವರ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ ಮತ್ತು “ತಂಜಾವೂರು ನಿಜವಾಗಿಯೂ ಸುಂದರವಾಗಿದೆ! ಮತ್ತು ಭಾರತದಲ್ಲಿ ನೋಡಲು ಸುಂದರವಾದ ಇನ್ನೂ ಸುಂದರವಾದ ಸ್ಥಳಗಳಿವೆ” ಎಂದಿದ್ದಾರೆ.
ಇದೇ ವೇಳೆ, ಗೋವಾದಲ್ಲಿ ನಡೆಯುತ್ತಿರುವ 54ನೇ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಚಲನಚಿತ್ರ ನಿರ್ಮಾಣ ಮತ್ತು ಹಣಕಾಸು ಕ್ಷೇತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಪ್ರಯತ್ನವನ್ನು ಚಿತ್ರ ನಿರ್ಮಾಪಕರು ಶ್ಲಾಘಿಸಿದ್ದಾರೆ.
Thanjavur is beautiful indeed! And, there is a lot more to see in India which will leave tourists from across the world spellbound. https://t.co/jBQwELb1BX pic.twitter.com/XjuLHZmwIy
— Narendra Modi (@narendramodi) December 8, 2023
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.