ರಾಂಚಿ: ಜಾರ್ಖಂಡ್ನ ಕಾಂಗ್ರೆಸ್ ರಾಜ್ಯಸಭಾ ಸಂಸದ ಧೀರಜ್ ಸಾಹು ಅವರಿಂದ ಆದಾಯ ತೆರಿಗೆ ಇಲಾಖೆಯು 200 ಕೋಟಿ ರೂಪಾಯಿ ನಗದು ವಶಪಡಿಸಿಕೊಂಡ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ನಾಗರಿಕರು ನೋಟುಗಳ ರಾಶಿಯನ್ನು ನೋಡಬೇಕು ಮತ್ತು ನಂತರ ವಿರೋಧ ಪಕ್ಷದ ನಾಯಕರ ಭಾಷಣಗಳನ್ನು ಕೇಳಬೇಕು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
“ದೇಶವಾಸಿಗಳು ಈ ನೋಟುಗಳ ರಾಶಿಯನ್ನು ನೋಡಬೇಕು ಮತ್ತು ನಂತರ ಪ್ರತಿಪಕ್ಷಗಳ ನಾಯಕರ ಪ್ರಾಮಾಣಿಕ ಮಾತುಗಳನ್ನು ಕೇಳಬೇಕು. ಸಾರ್ವಜನಿಕರಿಂದ ಏನನ್ನು ಲೂಟಿ ಮಾಡಿದ್ದರೂ, ಪ್ರತಿ ಪೈಸೆಯನ್ನು ಹಿಂತಿರುಗಿಸಬೇಕು, ಇದು ಮೋದಿಯ ಗ್ಯಾರಂಟಿ” ಎಂದು ಪ್ರಧಾನಿ ಹೇಳಿದ್ದಾರೆ.
ಆದಾಯ ತೆರಿಗೆ ಇಲಾಖೆಯು ಒಡಿಶಾ ಮತ್ತು ಜಾರ್ಖಂಡ್ನ ಬೌದ್ ಡಿಸ್ಟಿಲರೀಸ್ ಪ್ರೈವೇಟ್ ಲಿಮಿಟೆಡ್ನಲ್ಲಿ ಗುರುವಾರ ದಾಳಿ ನಡೆಸಿ ಕಂಪನಿಯ ಕಚೇರಿಯಿಂದ ಭಾರಿ ಹಣವನ್ನು ವಶಪಡಿಸಿಕೊಂಡಿದೆ. ವಶಪಡಿಸಿಕೊಂಡ ಬೃಹತ್ ಮೊತ್ತದ ಹಣವನ್ನು ಎಣಿಸಲು ಹೆಚ್ಚಿನ ಎಣಿಕೆ ಯಂತ್ರಗಳಿಗೆ ಐಟಿ ಇಲಾಖೆಯು ಆರ್ಡರ್ ನೀಡಿದೆ.
ಆದಾಯ ತೆರಿಗೆ ಮೂಲಗಳ ಪ್ರಕಾರ, ಒಡಿಶಾದ ಬೋಲಂಗಿರ್ ಮತ್ತು ಸಂಬಲ್ಪುರ ಮತ್ತು ಜಾರ್ಖಂಡ್ನ ರಾಂಚಿ ಮತ್ತು ಲೋಹರ್ದಗಾದಲ್ಲಿ ದಾಳಿ ನಡೆಸಲಾಗಿದೆ. ಬಲದೇವ್ ಸಾಹು ಮತ್ತು ಗ್ರೂಪ್ ಆಫ್ ಕಂಪನಿಗಳ ಸಾತ್ಪುರ ಕಚೇರಿಯ ಮೇಲೂ ದಾಳಿ ನಡೆಸಲಾಗಿದೆ.
देशवासी इन नोटों के ढेर को देखें और फिर इनके नेताओं के ईमानदारी के 'भाषणों' को सुनें… 😂😂😂
जनता से जो लूटा है, उसकी पाई-पाई लौटानी पड़ेगी, यह मोदी की गारंटी है।
❌❌❌💵 💵 💵❌❌❌ pic.twitter.com/O2pEA4QTOj
— Narendra Modi (@narendramodi) December 8, 2023
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.