ಮುಂಬೈ: ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲೆಯ ರಾಜ್ಕೋಟ್ ಕೋಟೆಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಅನಾವರಣಗೊಳಿಸಿದರು. ಸಿಂಧುದುರ್ಗ ಕೋಟೆ ಸೇರಿದಂತೆ ಹಲವಾರು ಕರಾವಳಿ ಮತ್ತು ಸಮುದ್ರ ಕೋಟೆಗಳನ್ನು ನಿರ್ಮಿಸಿದ ಛತ್ರಪತಿ ಶಿವಾಜಿ ಮಹಾರಾಜರ ಶ್ರೀಮಂತ ಕಡಲ ಪರಂಪರೆಗೆ ಈ ಸಂದರ್ಭದಲ್ಲಿ ಮೋದಿ ನಮನ ಸಲ್ಲಿಸಿದರು.
ಅಲ್ಲದೇ ಸಿಂಧುದುರ್ಗಾದಲ್ಲಿ ನೌಕಾಪಡೆ ದಿನದ ಸಂಭ್ರಮಾಚರಣೆಯಲ್ಲಿ ಪ್ರಧಾನಿ ಭಾಗಿಯಾದರು ಮತ್ತು ರಾಜ್ಕೋಟ್ ಫೋರ್ಟ್ನಲ್ಲಿ ಗಾರ್ಡ್ ಆಫ್ ಹಾನರ್ ಸ್ವೀಕರಿಸಿದರು.
ಮರಾಠಾ ಸಾಮ್ರಾಜ್ಯದ ಸಂಸ್ಥಾಪಕ ಶಿವಾಜಿ ಮುದ್ರೆಯು ಹೊಸ ನೌಕಾ ಧ್ವಜದಲ್ಲಿ ಈಗ ರಾರಾಜಿಸುತ್ತಿದೆ, ಕಳೆದ ವರ್ಷ ಪ್ರಧಾನಿ ಮೋದಿ ಅವರು ಮೊದಲ ಸ್ವದೇಶಿ ವಿಮಾನವಾಹಕ ನೌಕೆ INS ವಿಕ್ರಾಂತ್ ಅನ್ನು ನಿಯೋಜಿಸಿದಾಗ ಅದನ್ನು ಅಳವಡಿಸಲಾಗಿತ್ತು.
ಇಂದು, ಪ್ರಧಾನಿ ಮೋದಿ ಅವರು ನೌಕಾಪಡೆಯ ದಿನದ ಸಂದರ್ಭದಲ್ಲಿ ಭಾರತೀಯ ನೌಕಾಪಡೆಯ ಕಾರ್ಯಾಚರಣೆಯ ಪ್ರದರ್ಶನದಲ್ಲಿ ಭಾಗವಹಿಸಿದರು.
VIDEO | PM Modi unveils the statue of Chhatrapati Shivaji Maharaj in Sindhudurg, Maharashtra. pic.twitter.com/nPO1r2ZZYl
— Press Trust of India (@PTI_News) December 4, 2023
#WATCH | Maharashtra: Prime Minister Narendra Modi attends the ‘Navy Day 2023’ celebrations at Sindhudurg and inspects the Guard of Honour at Rajkot Fort in Sindhudurg district. pic.twitter.com/wCtBztehmm
— ANI (@ANI) December 4, 2023
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.