ನವದೆಹಲಿ: ಸಂಸತ್ತಿನ ಚಳಿಗಾಲದ ಅಧಿವೇಶನಕ್ಕೂ ಮುನ್ನ ಇಂದು ಸಂಸತ್ ಲೈಬ್ರರಿ ಕಟ್ಟಡದಲ್ಲಿ ಸರ್ವಪಕ್ಷ ಸಭೆ ನಡೆಯಿತು. ಸಂಸತ್ತಿನ ಚಳಿಗಾಲದ ಅಧಿವೇಶನ ಡಿಸೆಂಬರ್ 4 ರಿಂದ 22 ರವರೆಗೆ ನಡೆಯಲಿರುವ ಹಿನ್ನೆಲೆಯಲ್ಲಿ ಸರ್ವಪಕ್ಷ ಸಭೆ ನಡೆದಿದೆ.
ಮುಂಬರುವ ಚಳಿಗಾಲದ ಅಧಿವೇಶನದಲ್ಲಿ ವಿಧೇಯಕಗಳನ್ನು ಸುಗಮವಾಗಿ ಅಂಗೀಕರಿಸಲು ಅನುವು ಮಾಡಿಕೊಡಬೇಕಾಗಿ ಸರ್ಕಾರ ಸಭೆಯಲ್ಲಿ ಸರ್ವಪಕ್ಷಗಳನ್ನು ವಿನಂತಿಸಿದೆ.
ಸಂಸತ್ತಿನ ಮಾನ್ಸೂನ್ ಅಧಿವೇಶನವು ಮಣಿಪುರದ ಹಿಂಸಾಚಾರದ ವಿಷಯದಿಂದಾಗಿ ಭಾರೀ ಗದ್ದಲಕ್ಕೆ ಒಳಪಟ್ಟಿತ್ತು. ಬಳಿಕ ಹೊಸ ಸಂಸತ್ತಿನಲ್ಲಿ ವಿಶೇಷ ಅಧಿವೇಶನವನ್ನು ನಡೆಸಿ ಮಹಿಳಾ ಮೀಸಲಾತಿ ಮಸೂದೆಯನ್ನು ಅಂಗೀಕರಿಸಲಾಗಿತ್ತು.
ಮುಂಬರುವ ಚಳಿಗಾಲದ ಅಧಿವೇಶನದಲ್ಲಿ ಹಲವು ಪ್ರಮುಖ ಮಸೂದೆಗಳನ್ನು ಕೇಂದ್ರ ಅನುಮೋದಿಸಲು ಸಿದ್ಧತೆ ನಡೆಸಿದೆ.
ಸರ್ವಪಕ್ಷ ಸಭೆಯಲ್ಲಿ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರು ಆಡಳಿತಾರೂಢ ಸರ್ಕಾರದಿಂದ ಭಾಗವಹಿಸಿದ ನಾಯಕರು. ಜೈರಾಮ್ ರಮೇಶ್ ಮತ್ತು ಗೌರವ್ ಗೊಗೊಯ್ ಅವರು ಕಾಂಗ್ರೆಸ್ ಪಕ್ಷದಿಂದ ಭಾಗಿಯಾಗಿದ್ದಾರೆ.
#WATCH | Delhi: An all-party meeting is underway at the Parliament Library building, ahead of the winter session of Parliament.
The winter session of Parliament, 2023 will begin from December 4 and continue till December 22. pic.twitter.com/PSwDtGFyPk
— ANI (@ANI) December 2, 2023
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.