ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಬಂಡಿಪೋರಾ ಜಿಲ್ಲೆಯ ಗುರೇಜ್ ಸೆಕ್ಟರ್ ಸ್ವಾತಂತ್ರ್ಯದ ನಂತರ ಮೊದಲ ಬಾರಿಗೆ ಭಾನುವಾರ ವಿದ್ಯುತ್ ಗ್ರಿಡ್ಗೆ ಸಂಪರ್ಕ ಹೊಂದಿದೆ. ಪಾಕಿಸ್ತಾನದ ಗಡಿಗೆ ಹೊಂದಿಕೊಂಡಿರುವ ಈ ಪ್ರದೇಶದಲ್ಲಿ ಇಲ್ಲಿಯವರೆಗೆ ಡೀಸೆಲ್ ಜನರೇಟರ್ ಮೂಲಕ ವಿದ್ಯುತ್ ನೀಡಲಾಗುತ್ತಿತ್ತು.
ಕಾಶ್ಮೀರ ವಿದ್ಯುತ್ ವಿತರಣಾ ನಿಗಮ ಲಿಮಿಟೆಡ್ (KPDCL) ನಿನ್ನೆ ಸಾಮಾಜಿಕ ಮಾಧ್ಯಮ ವೇದಿಕೆ X ನಲ್ಲಿ ಇದನ್ನು ಪ್ರಕಟಿಸಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಗುರೇಜ್ ಸೆಕ್ಟರ್ ಮಾತ್ರ ವಿದ್ಯುತ್ಗಾಗಿ ಜನರೇಟರ್ ಸೆಟ್ಗಳ ಮೇಲೆ ಅವಲಂಬಿತವಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಈ ದಿನವನ್ನು ಐತಿಹಾಸಿಕ ಎಂದು ಬಣ್ಣಿಸಿದ್ದಾರೆ.ಚಳಿಗಾಲದಲ್ಲಿ ಹಿಮಪಾತದ ಸಮಯದಲ್ಲಿ, ಗುರೇಜ್ ಸೆಕ್ಟರ್ನಲ್ಲಿ ತಿಂಗಳುಗಟ್ಟಲೆ ವಿದ್ಯುತ್ ಇರಲಿಲ್ಲ. ಬಂಡಿಪೋರಾ-ಗುರೆಜ್ ಟ್ರಾನ್ಸ್ಮಿಷನ್ ಲೈನ್ ಯೋಜನೆಯಡಿಯಲ್ಲಿ ಗುರೆಜ್ ಅನ್ನು ಪವರ್ ಗ್ರಿಡ್ಗೆ ಸಂಪರ್ಕಿಸಲಾಗಿದೆ.
ವಿದ್ಯುತ್ ಬಂದ ನಂತರ, 75 ವರ್ಷಗಳಲ್ಲಿ ಮೊದಲ ಬಾರಿಗೆ ಇಡೀ ಪ್ರದೇಶವನ್ನು ಬಲ್ಬ್ ದೀಪಗಳಿಂದ ಬೆಳಗಿಸಲಾಯಿತು. ವಿದ್ಯುತ್ ಇಲಾಖೆ ನೌಕರರಿಗೆ ಸ್ಥಳೀಯರು ಕುಣಿದು ಕುಪ್ಪಳಿಸುವ ಮೂಲಕ ಕೃತಜ್ಞತೆ ಸಲ್ಲಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.