
ದೆಹಲಿ: ಕಂದಾಯ ಸಚಿವರಾದ ಕೃಷ್ಣೇಭೌರೇ ಗೌಡ ಮತ್ತು ಕೃಷಿ ಸಚಿವರಾದ ಎನ್. ಚೆಲುವರಾಯ ಸ್ವಾಮಿ ಅವರು ಗುರುವಾರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಗುರುವಾರ ದೆಹಲಿಯಲ್ಲಿ ಭೇಟಿಯಾದರು. ಶೀಘ್ರದಲ್ಲೇ ಬರ ಪರಿಹಾರ ಮೊತ್ತವನ್ನು ಬಿಡುಗಡೆ ಮಾಡಿವಂತೆ ಮನವಿ ಮಾಡಿದರು.
ರಾಜ್ಯದಲ್ಲಿ ಈಗಾಗಲೇ ಬರ ಘೋಷಣೆ ಮಾಡಲಾಗಿದ್ದು, ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಈ ಸಂಬಂಧ ಶೀಘ್ರ ನಿರ್ಧಾರ ತೆಗೆದುಕೊಂಡು ಬರ ಪರಿಹಾರ ಹಣ ಬಿಡುಗಡೆಗೊಳಿಸಿ ಎಂದು ಕೇಂದ್ರ ಹಣಕಾಸು ಸಚಿವರಿಗೆ ಮನವಿ ಮಾಡಿದ್ದಾಗಿ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
ಸಚಿವರ ಭೇಟಿಯ ಕುರಿತು ಇಂದು ಟ್ವೀಟ್ ಮಾಡಿರುವ ನಿರ್ಮಲಾ ಸೀತಾರಾಮನ್ ಅವರು, “ಕರ್ನಾಟಕ ಸರ್ಕಾರದ ಕಂದಾಯ ಸಚಿವರು ಶ್ರೀ ಕೃಷ್ಣ ಭೈರೇಗೌರ ಮತ್ತು ಕೃಷಿ ಸಚಿವರಾದ ಶ್ರೀ ಎನ್. ಚೆಲುವರಾಯ ಸ್ವಾಮಿ ಅವರು ನಿನ್ನೆ ಭೇಟಿಯಾಗಿದ್ದರು. ಭಾರತ ಸರ್ಕಾರ ತೆಗೆದುಕೊಳ್ಳುತ್ತಿರುವ ಕ್ರಮಗಳ ಬಗ್ಗೆ ಸಚಿವರಿಗೆ ತಿಳಿಸುವುದರ ಜೊತೆಗೆ ಐಟಿಸಿ ಕಾರ್ಪ್ಕಾಮ್ನ ಸಿಎಂಡಿ ಶ್ರೀ ಸಂಜೀವ್ ಪುರಿ ಅವರ ತಂಡವು ಕರ್ನಾಟಕಕ್ಕೆ ಹೋಗಿ ಬರ ಪೀಡಿತ ರೈತರನ್ನು ಭೇಟಿ ಮಾಡಲು ಮತ್ತು ಕರ್ನಾಟಕದಿಂದ ಶ್ರೀಅನ್ನ ಸಿರಿಧಾನ್ಯ ಖರೀದಿಸಲು ಅನುಕೂಲವಾಗುವಂತೆ ನಾನು ಮಾತನಾಡಿದ್ದೇನೆ. ಅಲ್ಲದೆ ಕರ್ನಾಟಕದ ರೈತರಿಗೆ ನೆರವಾಗುವ ಇತರ ಕ್ರಮಗಳನ್ನು ಪರಿಗಣಿಸುವಂತೆ ಐಟಿಸಿಗೆ ತಿಳಿಸಿದ್ದೇನೆ” ಎಂದಿದ್ದಾರೆ.
ಕಂದಾಯ ಸಚಿವರು ಶ್ರೀ @krishnabgowda ಮತ್ತು ಕೃಷಿ ಸಚಿವರಾದ ಶ್ರೀ ಎನ್. ಚೆಲುವರಾಯ ಸ್ವಾಮಿ, ಕರ್ನಾಟಕ ಸರ್ಕಾರ ಅವರು ನಿನ್ನೆ ಭೇಟಿಯಾಗಿದ್ದರು.
ಭಾರತ ಸರ್ಕಾರ ತೆಗೆದುಕೊಳ್ಳುತ್ತಿರುವ ಕ್ರಮಗಳ ಬಗ್ಗೆ ಸಚಿವರಿಗೆ ತಿಳಿಸುವುದರ ಜೊತೆಗೆ @ITCCorpCom ಯ CMD ಶ್ರೀ ಸಂಜೀವ್ ಪುರಿ ಅವರ ತಂಡವು ಕರ್ನಾಟಕಕ್ಕೆ ಹೋಗಿ ಬರ ಪೀಡಿತ ರೈತರನ್ನು ಭೇಟಿ…— Nirmala Sitharaman (@nsitharaman) November 24, 2023
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.


