ನವದೆಹಲಿ: ‘ಪಟ್ಟಿ ಮಾಡಲಾದ ವೈಯಕ್ತಿಕ ಭಯೋತ್ಪಾದಕ’ ಗುರುಪತ್ವಂತ್ ಸಿಂಗ್ ಪನ್ನುನ್ ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆಯು ಪ್ರಕರಣ ದಾಖಲಿಸಿದೆ. ಏರ್ ಇಂಡಿಯಾ ಏರ್ಲೈನ್ಸ್ನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರಿಗೆ ಬೆದರಿಕೆ ಹಾಕುವ ಮತ್ತು ಏರ್ಲೈನ್ನ ಕಾರ್ಯಾಚರಣೆಯನ್ನು ಮುಚ್ಚುವ ಅವನ ಇತ್ತೀಚಿನ ವೀಡಿಯೋ ವೈರಲ್ ಆಗಿದ್ದು, ಈ ಸಂಬಂಧ ಪ್ರಕರಣವನ್ನು ದಾಖಲಿಸಲಾಗಿದೆ.
ಏರ್ ಇಂಡಿಯಾವನ್ನು ಜಗತ್ತಿನಲ್ಲಿ ಕಾರ್ಯನಿರ್ವಹಿಸಲು ಬಿಡುವುದಿಲ್ಲ ಎಂದು ಪನ್ನುನ್ ಬೆದರಿಕೆ ಹಾಕಿದ್ದ ಎಂದು ವರದಿಗಳು ತಿಳಿಸಿವೆ.
ಪನ್ನುನ್ ಬೆದರಿಕೆಗಳು ಆತಂಕವನ್ನು ಸೃಷ್ಟಿ ಮಾಡಿದೆ. ಮಾತ್ರವಲ್ಲ ಕೆನಡಾ, ಭಾರತ ಮತ್ತು ಏರ್ ಇಂಡಿಯಾದ ವಿಮಾನಗಳು ಕಾರ್ಯನಿರ್ವಹಿಸುವ ಇತರ ಕೆಲವು ದೇಶಗಳಲ್ಲಿ ಭದ್ರತಾ ಪಡೆಗಳು ಈತನ ಎಚ್ಚರಿಕೆಯ ಸಂಬಂಧ ತನಿಖೆಗಳನ್ನು ಮಾಡಬೇಕಾದ ಅನಿವಾರ್ಯತೆ ಬಂದೊದಗಿದೆ.
ಭಾರತದಲ್ಲಿ ಭಯೋತ್ಪಾದನೆಯನ್ನು ಪುನರುಜ್ಜೀವನಗೊಳಿಸುವ ಮತ್ತು ಭಾರತದಲ್ಲಿ ಭಯೋತ್ಪಾದಕ ಕೃತ್ಯಗಳನ್ನು ಉತ್ತೇಜಿಸುವ ತನ್ನ ಯೋಜಿತ ಯೋಜನೆಯ ಭಾಗವಾಗಿ, ಪನ್ನುನ್ ಪಂಜಾಬ್ ರಾಜ್ಯದಲ್ಲಿನ ಕೆಲವು ಸಮಸ್ಯೆಗಳ ಬಗ್ಗೆ, ವಿಶೇಷವಾಗಿ ಸಿಖ್ ಧರ್ಮಿಯರನ್ನು ಇತರ ಸಮುದಾಯ ಹಾಗೂ ದೇಶದ ವಿರುದ್ಧ ಎತ್ತಿಕಟ್ಟಲು ಸುಳ್ಳು ನಿರೂಪಣೆಯನ್ನು ಸೃಷ್ಟಿಸುತ್ತಿದ್ದಾನೆ ಎಂದು ಎನ್ಐಎ ಹೇಳಿದೆ.
ಇತ್ತೀಚಿನ ಬೆದರಿಕೆಯು ಕೂಡ ಅದೇ ಉದ್ದೇಶದಿಂದ ಹಾಕಲಾಗಿದೆ, ಪನ್ನುನ್ ಈ ಹಿಂದೆ ಕೂಡ ದೇಶದಲ್ಲಿ ರೈಲ್ವೇ ಸೇರಿದಂತೆ ಅಗತ್ಯ ಸಾರಿಗೆ ಜಾಲ ವ್ಯವಸ್ಥೆಗಳು ಮತ್ತು ಉಷ್ಣ ವಿದ್ಯುತ್ ಸ್ಥಾವರಗಳನ್ನು ನಾಶಪಡಿಸುವ ಬೆದರಿಕೆಯನ್ನು ಹಾಕಿದ್ದನು.
ಗೃಹ ವ್ಯವಹಾರಗಳ ಸಚಿವಾಲಯವು 2019 ರಲ್ಲಿ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯಿದೆಯಡಿಯಲ್ಲಿ ಸಿಖ್ಸ್ ಫಾರ್ ಜಸ್ಟಿಸ್ (SFJ) ಅನ್ನು ಕಾನೂನುಬಾಹಿರ ಸಂಘ ಎಂದು ನಿಷೇಧಿಸಿತು. 2020 ರಲ್ಲಿ ಸರ್ಕಾರವು ಪನ್ನುನ್ ಅನ್ನು ‘ವೈಯಕ್ತಿಕ ಭಯೋತ್ಪಾದಕ’ ಎಂದು ಪಟ್ಟಿ ಮಾಡಿದೆ. ಪನ್ನೂನ್ ಅಂದಿನಿಂದ ಎನ್ಐಎ ಕಣ್ಗಾವಲಿನ ಅಡಿಯಲ್ಲಿದ್ದಾನೆ. 2019 ರಲ್ಲಿ ಭಯೋತ್ಪಾದನಾ ನಿಗ್ರಹ ಸಂಸ್ಥೆಯು ಅವನ ವಿರುದ್ಧ ತನ್ನ ಮೊದಲ ಪ್ರಕರಣವನ್ನು ದಾಖಲಿಸಿತು. ಈ ವರ್ಷದ ಸೆಪ್ಟೆಂಬರ್ನಲ್ಲಿ, ಅಮೃತಸರ ಮತ್ತು ಚಂಡೀಗಢದಲ್ಲಿ ಈತನ ಮನೆ ಮತ್ತು ಭೂಮಿಯನ್ನು ಎನ್ಐಎ ವಶಪಡಿಸಿಕೊಂಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.