ನವದೆಹಲಿ: ಭಾರತೀಯ ಪೇಟೆಂಟ್ ಕಛೇರಿಯು 2023-24ರ ಆರ್ಥಿಕ ವರ್ಷದಲ್ಲಿ ನವೆಂಬರ್ 15 ರವರೆಗೆ ಇದುವರೆಗಿನ ಅತ್ಯಧಿಕ 41,010 ಪೇಟೆಂಟ್ಗಳನ್ನು ಪ್ರದಾನಿಸಿದೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಹೇಳಿದ್ದಾರೆ.
2013-14ನೇ ಹಣಕಾಸು ವರ್ಷದಲ್ಲಿ 4,227 ಪೇಟೆಂಟ್ಗಳನ್ನು ನೀಡಲಾಗಿತ್ತು.
“ಇದೊಂದು ದಾಖಲೆಯಾಗಿದೆ. 2023-24ರಲ್ಲಿ ಇದುವರೆಗಿನ ಅತಿ ಹೆಚ್ಚು ಪೇಟೆಂಟ್ಗಳನ್ನು ನೀಡಲಾಗಿದೆ” ಎಂದು ಪಿಯೂಶ್ ಗೋಯಲ್ ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಇದು ಗಮನಾರ್ಹ ಸಾಧನೆ ಎಂದು ಬಣ್ಣಿಸಿದರು ಮತ್ತು ಇದು ನಾವೀನ್ಯತೆ-ಚಾಲಿತ ಜ್ಞಾನ ಆರ್ಥಿಕತೆಯತ್ತ ಭಾರತದ ಪಯಣದಲ್ಲಿ ಒಂದು ಮೈಲಿಗಲ್ಲನ್ನು ಗುರುತಿಸುತ್ತದೆ ಎಂದರು.
“ಭಾರತದ ಯುವಕರು ಇಂತಹ ದಾಪುಗಾಲುಗಳ ಉತ್ತಮ ಫಲಾನುಭವಿಗಳಾಗುತ್ತಾರೆ” ಎಂದು ಅವರು ಹೇಳಿದರು.
ಭಾರತದಲ್ಲಿ ಪೇಟೆಂಟ್ ಅರ್ಜಿಗಳ ಹೆಚ್ಚಳವು ಅದರ ಯುವಜನತೆಯ ಹೆಚ್ಚುತ್ತಿರುವ ನವೀನ ಉತ್ಸಾಹವನ್ನು ಪ್ರದರ್ಶಿಸುತ್ತದೆ ಮತ್ತು ಮುಂಬರುವ ಸಮಯಗಳಿಗೆ ಇದು ಅತ್ಯಂತ ಸಕಾರಾತ್ಮಕ ಸಂಕೇತವಾಗಿದೆ ಎಂದು ಪ್ರಧಾನ ಮಂತ್ರಿ ಇತ್ತೀಚೆಗೆ ಹೇಳಿದ್ದರು.
ವಿಶ್ವ ಬೌದ್ಧಿಕ ಆಸ್ತಿ ಸಂಸ್ಥೆಯ ವರದಿಯ ಪ್ರಕಾರ, ಭಾರತೀಯರ ಪೇಟೆಂಟ್ ಅರ್ಜಿಗಳು 2022 ರಲ್ಲಿ ಶೇಕಡಾ 31.6 ರಷ್ಟು ಬೆಳೆದಿದೆ.
This is a notable feat, marking a milestone in our journey towards an innovation-driven knowledge economy. India’s youth will be great beneficiaries of such strides. https://t.co/IQ6IJIYrBZ
— Narendra Modi (@narendramodi) November 17, 2023
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.