ನವದೆಹಲಿ: ಭಾರತೀಯ ರೈಲ್ವೇ ಜೊತೆಗೆ ಲೆಜೆಂಡ್ಸ್ ಲೀಗ್ ಕ್ರಿಕೆಟ್ ರಾಷ್ಟ್ರವ್ಯಾಪಿ ಅಭಿಯಾನವನ್ನು ಆರಂಭಿಸುತ್ತಿದೆ. ಲೀಗ್ನ ಅಸ್ಕರ್ ಟ್ರೋಫಿಯು ವಂದೇ ಭಾರತ್ ಎಕ್ಸ್ಪ್ರೆಸ್ನಲ್ಲಿ ನವೆಂಬರ್ 8ರಿಂದ 17 ಭಾರತೀಯ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಸಂಚರಿಸಲಿದೆ. ರೈಲ್ವೆಯು ವಾಣಿಜ್ಯ ಪಾಲುದಾರನಾಗಿ ಲೀಗ್ಗೆ ಸೇರಿಕೊಂಡಿದೆ.
ದೇಶದ ಪ್ರತಿಯೊಂದು ಭಾಗದ ಕ್ರಿಕೆಟ್ ಪ್ರೇಮಿಗಳ ಕಲ್ಪನೆಯನ್ನು ಸೆರೆಹಿಡಿಯಲು 15 ದಿನಗಳ ಅಭಿಯಾನ ವಿಶಿಷ್ಟವಾದ ಮೊದಲ ಈ ರೀತಿಯ ಉಪಕ್ರಮವಾಗಿದೆ. ಕ್ರಿಕೆಟ್ ಲೆಜೆಂಡ್ಗಳೊಂದಿಗೆ ಕ್ರಿಕೆಟ್ ಪ್ರೇಮಿಗಳು ವಂದೇ ಭಾರತ್ ಎಕ್ಸ್ಪ್ರೆಸ್ ಮೂಲಕ ಲೆಜೆಂಡ್ಸ್ ಲೀಗ್ ಕ್ರಿಕೆಟ್ನ ಭಾಗವಾಗಲಿದ್ದಾರೆ ಎಂದು ಈಶಾನ್ಯ ಫ್ರಾಂಟಿಯರ್ ರೈಲ್ವೆ (ಎನ್ಎಫ್ಆರ್) ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ (ಸಿಪಿಆರ್ಒ) ಸಬ್ಯಸಾಚಿ ಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬುಧವಾರದಂದು ನವದೆಹಲಿಯಿಂದ ಹಿಮಾಚಲ ಪ್ರದೇಶದ ಉನಾಗೆ ಪಯಣ ಆರಂಭಿಸಲಿದೆ. ಭಾರತೀಯ ರೈಲ್ವೇ ಕ್ರೀಡೆಯನ್ನು ಉತ್ತೇಜಿಸುತ್ತಿರುವ ಮಹತ್ವದ ಸಂಸ್ಥೆಯಾದ ಕಾರಣ ಈ ಅಭಿಯಾನವನ್ನು ಉತ್ತೇಜಿಸಲು ಸಹಾಯ ಮಾಡುವುದಾಗಿ ಲೆಜೆಂಡ್ಸ್ ಲೀಗ್ ಕ್ರಿಕೆಟ್ಗೆ ಭರವಸೆ ನೀಡಿದೆ. ಅನೇಕ ಕೇಂದ್ರ ಸಚಿವರು ಮತ್ತು ಭಾರತೀಯ ರೈಲ್ವೇ ತಂಡವು ಈ ಪ್ರಯಾಣದ ಭಾಗವಾಗಿರಲಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್, “ನಾವು ಲೆಜೆಂಡ್ಸ್ ಲೀಗ್ ಕ್ರಿಕೆಟ್ ಮತ್ತು ಲೆಜೆಂಡರಿ ಆಟಗಾರರನ್ನು ವಂದೇ ಭಾರತ್ ಎಕ್ಸ್ಪ್ರೆಸ್ನಲ್ಲಿ ಸ್ವಾಗತಿಸುತ್ತೇವೆ. ರಾಷ್ಟ್ರದಾದ್ಯಂತ ಕ್ರೀಡೆಗಳನ್ನು ಉತ್ತೇಜಿಸುವ ಈ ಅದ್ಭುತ ಪ್ರಯಾಣವನ್ನು ಎದುರು ನೋಡುತ್ತಿದ್ದೇವೆ” ಎಂದು ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.