ನವದೆಹಲಿ: ಭಾರತದ ಹೂಡಿಕೆದಾರ ಸ್ನೇಹಿ ನೀತಿಗಳು ದೇಶದ ಆಹಾರ ಕ್ಷೇತ್ರವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಇಂದು ಹೇಳಿದ್ದಾರೆ.
ನವದೆಹಲಿಯಲ್ಲಿ ‘ವರ್ಲ್ಡ್ ಫುಡ್ ಇಂಡಿಯಾ 2023’ ರ ಎರಡನೇ ಆವೃತ್ತಿಯನ್ನು ಉದ್ಘಾಟಿಸಿದ ಮೋದಿ, ಭಾರತದ ಆಹಾರ ವೈವಿಧ್ಯತೆಯು ಜಾಗತಿಕ ಹೂಡಿಕೆದಾರರಿಗೆ ಲಾಭಾಂಶವಾಗಿದೆ ಎಂದು ಒತ್ತಿ ಹೇಳಿದರು. 21ನೇ ಶತಮಾನದಲ್ಲಿ ಜಗತ್ತು ಎದುರಿಸುತ್ತಿರುವ ಪ್ರಮುಖ ಸವಾಲುಗಳಲ್ಲಿ ಆಹಾರ ಭದ್ರತೆಯೂ ಒಂದು ಎಂದರು.
ಆಹಾರ ಕ್ಷೇತ್ರದಲ್ಲಿ ಸ್ಟಾರ್ಟ್ಅಪ್ಗಳು ಮತ್ತು ಕಂಪನಿಗಳಿಗೆ ಇದೊಂದು ಸುವರ್ಣಾವಕಾಶವಾಗಿದೆ ಮತ್ತು ಆಹಾರ ಸಂಸ್ಕರಣಾ ಉದ್ಯಮದ ಪ್ರತಿಯೊಂದು ವಲಯದಲ್ಲಿ ಭಾರತವು ಗಮನಾರ್ಹ ಬೆಳವಣಿಗೆಯನ್ನು ಸಾಧಿಸಿದೆ ಎಂದು ಅವರು ಎತ್ತಿ ತೋರಿಸಿದರು. ಪ್ಯಾಕೇಜ್ಡ್ ಆಹಾರದ ಬೇಡಿಕೆ ಗಮನಾರ್ಹವಾಗಿ ಹೆಚ್ಚಾಗಿದೆ ಮತ್ತು ಇದು ರೈತರು, ಸ್ಟಾರ್ಟ್ಅಪ್ಗಳು ಮತ್ತು ಉದ್ಯಮಿಗಳಿಗೆ ಅವಕಾಶಗಳನ್ನು ಸೃಷ್ಟಿಸುತ್ತಿದೆ ಎಂದು ಮೋದಿ ಹೇಳಿದರು.
ಭಾರತದಲ್ಲಿ ಮಹಿಳೆಯರು ಆಹಾರ ಸಂಸ್ಕರಣಾ ಉದ್ಯಮವನ್ನು ಮುನ್ನಡೆಸುವ ಸ್ವಾಭಾವಿಕ ಸಾಮರ್ಥ್ಯವನ್ನು ಹೊಂದಿದ್ದಾರೆ ಎಂದು ಪ್ರಧಾನಿ ಗಮನಿಸಿದರು. ಕ್ಷೇತ್ರದ ಮಹಿಳೆಯರಿಗೆ ಸಹಾಯ ಮಾಡಲು ಪ್ರತಿ ಹಂತದಲ್ಲೂ ಮಹಿಳಾ ಉದ್ಯಮಿಗಳು ಮತ್ತು ಸ್ವಸಹಾಯ ಗುಂಪುಗಳನ್ನು ಉತ್ತೇಜಿಸಲಾಗುತ್ತಿದೆ ಎಂದು ಅವರು ಹೇಳಿದರು.
ದೇಶದ ಸುಸ್ಥಿರ ಆಹಾರ ಸಂಸ್ಕೃತಿಯು ಸಾವಿರಾರು ವರ್ಷಗಳಿಂದ ವಿಕಸನಗೊಂಡಿದೆ ಮತ್ತು ಭಾರತದ ಪೂರ್ವಜರು ಆಹಾರ ಪದ್ಧತಿಯನ್ನು ಆಯುರ್ವೇದದೊಂದಿಗೆ ಜೋಡಿಸಿದ್ದಾರೆ. ಭಾರತದ ಆಹಾರ ಜ್ಞಾನದ ಸಂಪತ್ತಿನಿಂದ ಇಡೀ ವಿಶ್ವವೇ ಲಾಭ ಪಡೆಯಲಿದೆ ಎಂದರು.
ಈ ವರ್ಷ ಅಂತರರಾಷ್ಟ್ರೀಯ ಸಿರಿಧಾನ್ಯ ವರ್ಷವನ್ನು ಆಚರಿಸಲಾಗುತ್ತಿದ್ದು, ಭಾರತವು ಸಿರಿಧಾನ್ಯಕ್ಕೆ ಶ್ರೀ ಅನ್ನದ ಸ್ಥಾನಮಾನವನ್ನು ನೀಡಿದೆ ಎಂದು ಅವರು ತಿಳಿಸಿದರು. ಸಿರಿಧಾನ್ಯ ಭಾರತದ ‘ಸೂಪರ್ಫುಡ್ ಬಕೆಟ್ನ ಪ್ರಮುಖ ಅಂಶವಾಗಿದೆ ಮತ್ತು ಶೀಘ್ರದಲ್ಲೇ, ಇವು ವಿಶ್ವದ ಮೂಲೆ ಮೂಲೆಗಳನ್ನು ತಲುಪುತ್ತವೆ ಎಂದು ಅವರು ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.