ನವದೆಹಲಿ: ಯುನೆಸ್ಕೋದ ಕ್ರಿಯೇಟಿವ್ ಸಿಟಿ ನೆಟ್ವರ್ಕ್ಗೆ ಭಾರತ ಎರಡು ನಾಮನಿರ್ದೇಶನಗಳನ್ನು ಪುರಸ್ಕರಿಸಲಾಗಿದೆ. ಕೇರಳದ ಕೋಝಿಕ್ಕೋಡ್ನ ಸಾಹಿತ್ಯಕ್ಕಾಗಿ ಮತ್ತು ಮಧ್ಯಪ್ರದೇಶದ ಗ್ವಾಲಿಯರ್ ಸಂಗೀತಕ್ಕಾಗಿ ಯುನೆಸ್ಕೋದ ಕ್ರಿಯೇಟಿವ್ ಸಿಟಿ ನೆಟ್ವರ್ಕ್ಗೆ ಸೇರ್ಪಡೆಗೊಂಡಿದೆ.
ಈ ಬಗ್ಗೆ ಟ್ವಿಟ್ ಮಾಡಿ ಹೆಮ್ಮೆ ವ್ಯಕ್ತಪಡಿಸಿರುವ ಮೋದಿ, “ಕೋಝಿಕ್ಕೋಡ್ನ ಶ್ರೀಮಂತ ಸಾಹಿತ್ಯ ಪರಂಪರೆ ಮತ್ತು ಗ್ವಾಲಿಯರ್ನ ಸುಮಧುರ ಪರಂಪರೆಯೊಂದಿಗೆ ಜಾಗತಿಕ ವೇದಿಕೆಯಲ್ಲಿ ಭಾರತದ ಸಾಂಸ್ಕೃತಿಕ ಚೈತನ್ಯವು ಪ್ರಕಾಶಮಾನವಾಗಿ ಹೊಳೆಯುತ್ತಿದೆ, ಇದೀಗ ಗೌರವಾನ್ವಿತ UNESCO ಕ್ರಿಯೇಟಿವ್ ಸಿಟೀಸ್ ನೆಟ್ವರ್ಕ್ಗೆ ಇವು ಸೇರುತ್ತಿದೆ. ಈ ಗಮನಾರ್ಹ ಸಾಧನೆಗಾಗಿ ಕೋಝಿಕ್ಕೋಡ್ ಮತ್ತು ಗ್ವಾಲಿಯರ್ ಜನರಿಗೆ ಅಭಿನಂದನೆಗಳು!” ಎಂದಿದ್ದಾರೆ
ನಾವು ಈ ಅಂತರಾಷ್ಟ್ರೀಯ ಮನ್ನಣೆಯನ್ನು ಆಚರಿಸುವಾಗ, ನಮ್ಮ ರಾಷ್ಟ್ರವು ನಮ್ಮ ವೈವಿಧ್ಯಮಯ ಸಾಂಸ್ಕೃತಿಕ ಸಂಪ್ರದಾಯಗಳನ್ನು ಸಂರಕ್ಷಿಸುವ ಮತ್ತು ಉತ್ತೇಜಿಸುವ ತನ್ನ ಬದ್ಧತೆಯನ್ನು ಪುನರುಚ್ಚರಿಸುತ್ತದೆ ಎಂದಿದ್ದಾರೆ.
ಅಲ್ಲದೇ ಈ ಪುರಸ್ಕಾರಗಳು ನಮ್ಮ ಅನನ್ಯ ಸಾಂಸ್ಕೃತಿಕ ನಿರೂಪಣೆಗಳನ್ನು ಪೋಷಿಸಲು ಮತ್ತು ಹಂಚಿಕೊಳ್ಳಲು ಸಮರ್ಪಿತವಾದ ಪ್ರತಿಯೊಬ್ಬ ವ್ಯಕ್ತಿಯ ಸಾಮೂಹಿಕ ಪ್ರಯತ್ನಗಳನ್ನು ಪ್ರತಿಬಿಂಬಿಸುತ್ತವೆ ಎಂದಿದ್ದಾರೆ.
India's cultural vibrancy shines brighter on the global stage with Kozhikode's rich literary legacy and Gwalior's melodious heritage now joining the esteemed UNESCO Creative Cities Network.
Congratulations to the people of Kozhikode and Gwalior on this remarkable achievement!… https://t.co/JgxRIDp20w
— Narendra Modi (@narendramodi) November 1, 2023
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.