ನವದೆಹಲಿ: ಭಾರತೀಯರು ನವೆಂಬರ್ 10, 2023 ರಿಂದ ಮೇ 10, 2024 ರವರೆಗೆ ವೀಸಾ ಇಲ್ಲದೆ ಥಾಯ್ಲೆಂಡ್ಗೆ ಭೇಟಿ ನೀಡಬಹುದು ಮತ್ತು 30 ದಿನಗಳವರೆಗೆ ಅಲ್ಲಿಯೇ ಇರಬಹುದು ಎಂದು ಥಾಯ್ ಪ್ರವಾಸೋದ್ಯಮದ ಘೋಷಣೆ ಮಾಡಿದೆ. ಇಲ್ಲಿಂದ ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸುವ ಪ್ರಯತ್ನದಲ್ಲಿ ಥಾಯ್ಲೆಂಡ್ ಈಗ ಭಾರತೀಯ ಮತ್ತು ತೈವಾನ್ ನಾಗರಿಕರಿಗೆ ವೀಸಾ ಅಗತ್ಯವನ್ನು ಮನ್ನಾ ಮಾಡಿದೆ. ಈ ಸೆಪ್ಟೆಂಬರ್ನಲ್ಲಿ ಅದು ಚೀನಾದ ಪ್ರಜೆಗಳಿಗೂ ಮನ್ನಾ ಮಾಡಿತ್ತು.
ಮೊನ್ನೆಯಷ್ಟೇ ಶ್ರೀಲಂಕಾ ಕೂಡ ಭಾರತೀಯರಿಗೆ ವೀಸಾ ಮನ್ನಾ ಮಾಡಿತ್ತು. ಮಾರ್ಚ್ 31, 2024 ರವರೆಗಿನ ಪ್ರಾಯೋಗಿಕ ಯೋಜನೆಯ ಭಾಗವಾಗಿ ಶ್ರೀಲಂಕಾ ಇತ್ತೀಚೆಗೆ ಭಾರತ, ಚೀನಾ ಮತ್ತು ರಷ್ಯಾ ಸೇರಿದಂತೆ ಏಳು ದೇಶಗಳ ಸಂದರ್ಶಕರಿಗೆ ವೀಸಾ-ಮುಕ್ತ ಪ್ರವೇಶವನ್ನು ಘೋಷಿಸಿದೆ.
ಕೋವಿಡ್ ನಂತರ, ಹಲವಾರು ದೇಶಗಳ ಪ್ರವಾಸೋದ್ಯಮ ಮಂಡಳಿಗಳು ಭಾರತೀಯ ಪ್ರಯಾಣಿಕರನ್ನು ಆಕರ್ಷಿಸುತ್ತಿವೆ. ಮಲೇಷ್ಯಾ, ಚೀನಾ ಮತ್ತು ದಕ್ಷಿಣ ಕೊರಿಯಾದ ನಂತರ ಸುಮಾರು 12 ಲಕ್ಷ ಮಂದಿ ಭಾರತೀಯರ ಆಗಮನದೊಂದಿಗೆ ಭಾರತವು ಈ ವರ್ಷ ಪ್ರವಾಸೋದ್ಯಮಕ್ಕೆ ಥೈಲ್ಯಾಂಡ್ನ ನಾಲ್ಕನೇ ಅತಿದೊಡ್ಡ ಮೂಲ ಮಾರುಕಟ್ಟೆಯಾಗಿದೆ.
ಭಾರತೀಯ ಸರ್ಕಾರದ ಅಂಕಿಅಂಶಗಳು 2011 ರಲ್ಲಿ ನಿರಂತರವಾಗಿ 1.4 ಕೋಟಿಯಿಂದ 2019 ರಲ್ಲಿ 2.7 ಕೋಟಿಗೆ ಥಾಯ್ಲೆಂಡ್ಗೆ ತೆರಳುವವರ ಸಂಖ್ಯೆ ಏರಿಕೆ ಆಗಿದೆ ಎಂದು ತೋರಿಸುತ್ತವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.