ತಿರುವನಂತಪುರಂ: ಕೇರಳದ ಕೊಚ್ಚಿಯ ಕಲಮಸ್ಸೆರಿಯ ಕನ್ವೆನ್ಷನ್ ಸೆಂಟರ್ ಭಾನುವಾರ ಆಯೋಜಿಸಿದ್ದ ಪ್ರಾರ್ಥನಾ ಸಭೆಯಲ್ಲಿ ಸಂಭವಿಸಿದ ಸ್ಫೋಟ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ಈ ನಡುವೆ ಘಟನೆಯನ್ನು ಮೃತಪಟ್ಟವರ ಸಂಖ್ಯೆಯ 3ಕ್ಕೆ ಏರಿಕೆಯಾಗಿದೆ. 40 ಕ್ಕೂ ಅಧಿಕ ಮಂದಿಗೆ ಗಾಯಗಳಾಗಿವೆ.
ಸ್ಪೋಟದಲ್ಲಿ ಗಾಯಗೊಂಡಿದ್ದ 12 ವರ್ಷದ ಬಾಲಕನೊಬ್ಬ ಸೋಮವಾರ ಮೃತಪಟ್ಟಿದ್ದಾನೆ ಎಂದು ಮೂಲಗಳು ತಿಳಿಸಿವೆ. ಹೀಗಾಗಿ ಮೃತರ ಸಂಖ್ಯೆ 3ಕ್ಕೆ ಏರಿಕೆಯಾಗಿದೆ. ಪ್ರಾರ್ಥನಾ ಸಭೆಯಲ್ಲಿ ಸುಮಾರು 2,200-2,500 ಜನ ಭಾಗವಹಿಸಿದ್ದರು ಎನ್ನಲಾಗಿದ್ದು, ನಿನ್ನೆ ಮಹಿಳೆ ಸೇರಿದಂತೆ ಇಬ್ಬರು ಸ್ಪೋಟದಿಂದ ಸಾವನ್ನಪ್ಪಿದ್ದು, ಹಲವು ಮಂದಿ ಗಾಯಗೊಂಡಿದ್ದಾರೆ.
ಈ ನಡುವೆ ಡೊಮಿನಿಕ್ ಮಾರ್ಟಿನ್ ಎಂದು ಗುರುತಿಸಲಾದ ವ್ಯಕ್ತಿಯೊಬ್ಬ ಸರಣಿ ಸ್ಫೋಟದ ಹೊಣೆ ಹೊತ್ತಿಕೊಂಡಿದ್ದು, ತ್ರಿಶೂರ್ನ ಕೊಡಕರ ಪೊಲೀಸ್ ಠಾಣೆಗೆ ಶರಣಾಗಿದ್ದಾನೆ. ಮಾರ್ಟಿನ್ ನೀಡುತ್ತಿರುವ ಹೇಳಿಕೆಗ ಸತ್ಯಾಸತ್ಯತೆಗಳನ್ನು ಇನ್ನೂ ಪರಿಶೀಲಿಸಬೇಕಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಯೆಹೋವ್ ವಿಟ್ನೆಸ್ ಸದಸ್ಯ ಎಂದು ಹೇಳಿಕೊಳ್ಳುವ ಡೊಮಿನಿಕ್ ಮಾರ್ಟಿನ್, ಕೊಡಕರ ಪೊಲೀಸ್ ಠಾಣೆಗೆ ಹಾಜರಾಗುವ ಮುನ್ನ ಫೇಸ್ಬುಕ್ ಲೈವ್ ವೀಡಿಯೊ ಮೂಲಕ ಬಹಿರಂಗವಾಗಿ ಅಪರಾಧವನ್ನು ಒಪ್ಪಿಕೊಂಡಿದ್ದಾನೆ. ಈ ವೀಡಿಯೋದಲ್ಲಿ, ದ್ವೇಷವನ್ನು ಉತ್ತೇಜಿಸುತ್ತಿರುವ ಕ್ರಿಶ್ಚಿಯನ್ ಪಂಗಡದ ಆಚರಣೆಗಳನ್ನು ಬದಲಾಯಿಸಲು ಪದೇ ಪದೇ ಮನವಿ ಮಾಡಿದರೂ, ಅವರು ಮಾತು ಕೇಳಲಿಲ್ಲ. ಪರಿಣಾಮವಾಗಿ, ಸಮಾವೇಶದಲ್ಲಿ ಬಾಂಬ್ ಇಡಲು ನಿರ್ಧರಿಸಿದೆ ಎಂದಿದ್ದಾನೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.