ವಿಶ್ವಸಂಸ್ಥೆ: ಮಂಗಳವಾರ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಪಾಕಿಸ್ತಾನವು ಭಯೋತ್ಪಾದನೆಯನ್ನು ಸಮರ್ಥಿಸಿಕೊಂಡಿದ್ದು,ವಿದೇಶಿ ಆಕ್ರಮಣದ ಅಡಿಯಲ್ಲಿ ವಾಸಿಸುವ ಜನರಿಗೆ ಭಯೋತ್ಪಾದನೆ ಕಾನೂನುಬದ್ಧ ಎಂದು ಪ್ರತಿಪಾದಿಸಿದೆ ಮತ್ತು ಕಾಶ್ಮೀರವನ್ನು ಪ್ಯಾಲೆಸ್ತೀನ್ನೊಂದಿಗೆ ಸಮೀಕರಿಸಲು ಪ್ರಯತ್ನಿಸಿದೆ. ಭಾರತ ಈ ಧೋರಣೆಯನ್ನು ಖಂಡಿಸಿದೆ.
ಪಾಕಿಸ್ತಾನದ ಖಾಯಂ ಪ್ರತಿನಿಧಿ ಮುನೀರ್ ಅಕ್ರಮ್ ಮಾತನಾಡಿ, “ಎಲ್ಲಾ ರೂಪಗಳು ಮತ್ತು ಅಭಿವ್ಯಕ್ತಿಗಳ ಭಯೋತ್ಪಾದನೆಯನ್ನು ಖಂಡಿಸುತ್ತೇವೆ ಆದರೆ “ಅಂತರರಾಷ್ಟ್ರೀಯ ಕಾನೂನಿನ ಅಡಿಯಲ್ಲಿ, ಸ್ವ-ನಿರ್ಣಯ ಮತ್ತು ರಾಷ್ಟ್ರೀಯ ವಿಮೋಚನೆಗಾಗಿ ವಿದೇಶಿ ಆಕ್ರಮಣದ ಅಡಿಯಲ್ಲಿ ವಾಸಿಸುವ ಜನರ ಹೋರಾಟವು ನ್ಯಾಯಸಮ್ಮತವಾಗಿದೆ ಮತ್ತು ಭಯೋತ್ಪಾದನೆಯೊಂದಿಗೆ ಸಮೀಕರಿಸಲಾಗುವುದಿಲ್ಲ”ಎಂದಿದ್ದಾರೆ.
ಭಾರತವು ಪಾಕಿಸ್ತಾನದ ಹೇಳಿಕೆಗಳನ್ನು ತಿರಸ್ಕರಿಸಿದೆ ಮತ್ತು ಅವುಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದೆ. ಭಾರತದ ಉಪ ಖಾಯಂ ಪ್ರತಿನಿಧಿ ಆರ್. ರವೀಂದ್ರ ಅವರು ಮಾತನಾಡಿ, “ನನ್ನ ದೇಶದ ಅವಿಭಾಜ್ಯ ಅಂಗಗಳಾಗಿರುವ ಕೇಂದ್ರಾಡಳಿತ ಪ್ರದೇಶಗಳನ್ನು ಉಲ್ಲೇಖಿಸಿ ಒಂದು ನಿಯೋಗವು ತನ್ನ ನಿತ್ಯದ ಹೇಳಿಕೆಯನ್ನು ನೀಡಿದೆ. ನಾನು ಈ ಹೇಳಿಕೆಗಳನ್ನು ತಿರಸ್ಕಾರದಿಂದ ಪರಿಗಣಿಸುತ್ತೇನೆ ಮತ್ತು ಸಮಯದ ಹಿತಾಸಕ್ತಿಯಿಂದ ಅವುಗಳಿಗೆ ಪ್ರತಿಕ್ರಿಯೆ ನೀಡುವುದಿಲ್ಲ. ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನ ಯಾವಾಗಲೂ ಕಾಶ್ಮೀರ ವಿಷಯವನ್ನು ಪ್ರಸ್ತಾಪಿಸುತ್ತದೆ, ಆದರೆ ಯಾವುದೇ ಬೆಂಬಲವನ್ನು ಪಡೆಯುವುದಿಲ್ಲ” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.