ನವದೆಹಲಿ: ಈಗಾಗಲೇ ಅರ್ಧದಷ್ಟು ಧ್ವಂಸವಾಗಿರುವ ಯುದ್ಧ ಪೀಡಿತ ಗಾಜಾದಲ್ಲಿ ಮತ್ತೊಂದು ದುರ್ಘಟನೆ ನಡೆದಿದೆ. ಮಂಗಳವಾರ ರಾತ್ರಿ ಗಾಜಾ ಆಸ್ಪತ್ರೆಯೊಂದರ ಮೇಲೆ ರಾಕೆಟ್ ದಾಳಿ ನಡೆದಿದ್ದು, ಇದರ ಪರಿಣಾಮವಾಗಿ ಕನಿಷ್ಠ 500 ವ್ಯಕ್ತಿಗಳ ಸಾವಿಗೀಡಾಗಿದ್ದಾರೆ ಎಂದು ವರದಿಗಳು ತಿಳಿಸಿವೆ.
ಇಸ್ರೇಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಈ ದುರ್ಘಟನೆಗೆ ಇಸ್ಲಾಮಿಕ್ ಜಿಹಾದ್ ಕಾರಣವೆಂದು ಹೇಳಿದ್ದಾರೆ. ಅಲ್ಲದೇ ಇದು ವೈಫಲ್ಯ ಕಂಡ ರಾಕೆಟ್ ದಾಳಿ ಎಂದು ಬಣ್ಣಿಸಿದ್ದಾರೆ. ಗಾಜಾ ಮೂಲದ ಭಯೋತ್ಪಾದಕರು ಇದನ್ನು ಹಾರಿಸಿದ್ದಾರೆ ಎಂಬುದನ್ನು ಇಸ್ರೇಲ್ ರಕ್ಷಣಾ ಪಡೆಗಳ ಕಾರ್ಯಾಚರಣಾ ವ್ಯವಸ್ಥೆ ಸೂಚಿಸಿದೆ ಎಂದು ನೆತನ್ಯಾಹು ಹೇಳಿದ್ದಾರೆ.
ವಿಫಲ ರಾಕೆಟ್ ಉಡಾವಣೆಯಲ್ಲಿ ಇಸ್ಲಾಮಿಕ್ ಜಿಹಾದ್ನ ಭಾಗಿಯನ್ನು ಬಹು ಮೂಲಗಳ ಗುಪ್ತಚರ ಖಚಿತಪಡಿಸಿದೆ ಎಂದಿದ್ದಾರೆ. “ಇಸ್ರೇಲ್ ರಕ್ಷಣಾ ಪಡೆಗಳ ಕಾರ್ಯಾಚರಣಾ ವ್ಯವಸ್ಥೆಯ ವಿಶ್ಲೇಷಣೆಯು ಗಾಜಾದಲ್ಲಿ ಭಯೋತ್ಪಾದಕರು ರಾಕೆಟ್ಗಳ ಸುರಿಮಳೆಗೈದಿದ್ದಾರೆ ಎಂಬುದನ್ನು ಸೂಚಿಸುತ್ತದೆ, ರಾಕೆಟ್ ಗಾಜಾದ ಅಲ್ ಅಹ್ಲಿ ಆಸ್ಪತ್ರೆಯ ಸಮೀಪದಲ್ಲಿ ಹಾದುಹೋಗಿದೆ” ಎಂದಿದ್ದಾರೆ.
An analysis of IDF operational systems indicates that a barrage of rockets was fired by terrorists in Gaza, passing in close proximity to the Al Ahli hospital in Gaza at the time it was hit.
Intelligence from multiple sources we have in our hands indicates that Islamic Jihad is…
— Benjamin Netanyahu – בנימין נתניהו (@netanyahu) October 17, 2023
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.