ನವದೆಹಲಿ: ಭಾರತ ಮತ್ತು ಕೆನಡಾ ನಡುವಿನ ರಾಜತಾಂತ್ರಿಕ ಉದ್ವಿಗ್ನತೆಯ ತಾರಕಕ್ಕೇರುತ್ತಿರುವ ನಡುವೆ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ಅವರು ತಮ್ಮ ದೇಶದಲ್ಲಿರುವ ಹಿಂದೂಗಳಿಗೆ ನವರಾತ್ರಿ ಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ.
ಭಾನುವಾರ ತಮ್ಮ ದೇಶದ ಹಿಂದೂ ಸಮುದಾಯದವರಿಗೆ ನವರಾತ್ರಿ ಹಬ್ಬದ ಶುಭಾಶಯ ತಿಳಿಸಿ ಟ್ವೀಟ್ ಮಾಡಿರುವ ಅವರು, ‘ನವರಾತ್ರಿಯ ಶುಭಾಶಯಗಳು’! ಹಿಂದೂ ಸಮುದಾಯದ ಸದಸ್ಯರಿಗೆ ಮತ್ತು ಈ ಹಬ್ಬವನ್ನು ಆಚರಿಸುತ್ತಿರುವ ಎಲ್ಲರಿಗೂ ನನ್ನ ಹೃತ್ಪೂರ್ವಕ ಶುಭಾಶಯವನ್ನು ತಿಳಿಸುತ್ತಿದ್ದೇನೆ” ಎಂದಿದ್ದಾರೆ.
ಖಲಿಸ್ತಾನಿ ನಾಯಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಗೆ ಭಾರತವೇ ಕಾರಣ, ಈ ಹತ್ಯೆಯಲ್ಲಿ ಭಾರತದ ಏಜೆಂಟ್ಗಳ ಕೈವಾಡ ಇದೆ ಎಂದು ಟ್ರುಡೋ ಹೇಳಿಕೆ ನೀಡಿದ ತರುವಾಯ ಭಾರತ ಮತ್ತು ಕೆನಡಾ ದೇಶಗಳ ನಡುವೆ ಉದ್ವಿಗ್ನತೆ ಏರ್ಪಟ್ಟಿದೆ. ಖಲಿಸ್ಥಾನಿ ಪರ ನಿಲ್ಲುವ ಟ್ರುಡೋ ಬಗ್ಗೆ ಕೆನಡಾದ ಹಿಂದೂ ಸಮುದಾಯದಲ್ಲೂ ಅಸಮಾಧಾನವಿದೆ. ಅಸಮಾಧಾನವನ್ನು ಹೋಗಲಾಡಿಸಲು ಅವರು ನವರಾತ್ರಿಗೆ ವಿಶೇಷ ಟ್ವಿಟ್ ಮಾಡಿದ್ದಾರೆ ಎಂದು ವಿಶ್ಲೇಷಿಸಲಾಗಿದೆ.
ಈ ನವರಾತ್ರಿ ಹಬ್ಬದಂದು ದುರ್ಗಾ ದೇವಿಯನ್ನು ಪೂಜಿಸಲಾಗುತ್ತದೆ. ಈ ನವರಾತ್ರಿಯೂ ಒಂಬತ್ತು ದಿನಗಳ ವರೆಗೂ ನಡೆಯುತ್ತದೆ.
Happy Navratri! I’m sending my warmest wishes to members of the Hindu community and all those who are celebrating this festival. https://t.co/ISCjvJqnKJ
— Justin Trudeau (@JustinTrudeau) October 15, 2023
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.