ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಬರೆದಿರುವ ಗರ್ಬಾ ಹಾಡು ಇದೀಗ ಮ್ಯೂಸಿಕ್ ವಿಡಿಯೋ ಆಗಿ ಬದಲಾಗಿದೆ. ಈ ನವರಾತ್ರಿಯಲ್ಲಿ ಈ ಹಾಡು ವಿಜ್ರಂಭಿಸಲಿದೆ.
ಧ್ವನಿ ಭಾನುಶಾಲಿ ಹಾಡಿರುವ ಮತ್ತು ತನಿಷ್ಕ್ ಬಾಗ್ಚಿ ಸಂಯೋಜಿಸಿದ ವೀಡಿಯೊವನ್ನು ಇಂದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿದ್ದು, ವೈರಲ್ ಆಗಿದೆ.
ಪ್ರಧಾನಿ ಮೋದಿ ಅವರು ಈ ಬಗ್ಗೆ ಟ್ವಿಟ್ ಮಾಡಿದ್ದು, “ನಾನು ಬರೆದಿರುವ ಗಾರ್ಬಾದ ಈ ಸುಂದರವಾದ ನಿರೂಪಣೆಗಾಗಿ ಧ್ವನಿ ಭಾನುಶಾಲಿ, ತನಿಷ್ಕ್ ಬಾಗ್ಚಿ ಮತ್ತು ಮ್ಯೂಸಿಕ್ ತಂಡಕ್ಕೆ ಧನ್ಯವಾದಗಳು. ಇದು ಅನೇಕ ನೆನಪುಗಳನ್ನು ಮರಳಿ ತರುತ್ತದೆ. ನಾನು ಈಗ ಹಲವು ವರ್ಷಗಳಿಂದ ಗರ್ಬಾ ಹಾಡು ಬರೆಯಲಿಲ್ಲ, ಆದರೆ ಕಳೆದ ಕೆಲವು ದಿನಗಳಿಂದ ನಾನು ಹೊಸ ಗರ್ಬಾವನ್ನು ಬರೆಯುವಲ್ಲಿ ಯಶಸ್ವಿಯಾಗಿದ್ದೇನೆ, ಅದನ್ನು ನಾನು ನವರಾತ್ರಿಯ ಸಮಯದಲ್ಲಿ ಹಂಚಿಕೊಳ್ಳುತ್ತೇನೆ” ಎಂದಿದ್ದಾರೆ.
ಗರ್ಬಾ ಗುಜರಾತಿ ನೃತ್ಯ ಪ್ರಕಾರವಾಗಿದ್ದು, ನವರಾತ್ರಿಯ ಸಂದರ್ಭದಲ್ಲಿ ಇದು ಹೆಚ್ಚು ಪ್ರಚಲಿತವಾಗುತ್ತದೆ.
Thank you @dhvanivinod, Tanishk Bagchi and the team of @Jjust_Music for this lovely rendition of a Garba I had penned years ago! It does bring back many memories. I have not written for many years now but I did manage to write a new Garba over the last few days, which I will… https://t.co/WAALGzAfnc
— Narendra Modi (@narendramodi) October 14, 2023
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.