ನವದೆಹಲಿ: ಸೇತು ಬಂಧನ್ ಯೋಜನೆಯಡಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಅರುಣಾಚಲ ಪ್ರದೇಶದಲ್ಲಿ 118.50 ಕೋಟಿ ರೂಪಾಯಿ ಮೌಲ್ಯದ ಏಳು ಸೇತುವೆಗಳ ಯೋಜನೆಗಳ ನಿರ್ಮಾಣಕ್ಕೆ ಅನುಮೋದನೆ ನೀಡಿದೆ ಎಂದು ಅರುಣಾಚಲ ಪ್ರದೇಶದ ಮುಖ್ಯಮಂತ್ರಿ ಪೆಮಾ ಖಂಡು ತಿಳಿಸಿದ್ದಾರೆ.
ಅನುಮೋದಿತ ಸೇತುವೆಗಳೆಂದರೆ ನಾಲ್ಕು ಬಲವರ್ಧಿತ ಸಿಮೆಂಟ್ ಕಾಂಕ್ರೀಟ್ ಸೇತುವೆಗಳು, ರಾಷ್ಟ್ರೀಯ ಹೆದ್ದಾರಿ 313 ರಲ್ಲಿ ಎರಡು ಸೇತುವೆಗಳು ಮತ್ತು ಒಂದು ಉಕ್ಕಿನ ಸಂಯೋಜಿತ ಸೇತುವೆ.
X ನಲ್ಲಿನ ತಮ್ಮ ಪೋಸ್ಟ್ನಲ್ಲಿ ಮುಖ್ಯಮಂತ್ರಿಯವರು ಈ ಬಗ್ಗೆ ಮಾಹಿತಿ ನೀಡಿದ್ದು, “ಸೇತು ಬಂಧನ್ ಯೋಜನೆಯ ಮೂಲಕ ಸಂಪರ್ಕದಲ್ಲಿನ ಅಂತರವನ್ನು ಕಡಿಮೆ ಮಾಡಲು ಸಾಧ್ಯವಾಗಿದೆ, ಅರುಣಾಚಲ ಪ್ರದೇಶದ ಸರ್ವತೋಮುಖ ಅಭಿವೃದ್ಧಿಗೆ ಗೌರವಾನ್ವಿತ ಪ್ರಧಾನಿ ಶ್ರೀ ನರೇಂದ್ರ ಮೋದಿ ಜಿ ಅವರ ಅಚಲ ಬದ್ಧತೆಗೆ ಧನ್ಯವಾದಗಳು” ಎಂದಿದ್ದಾರೆ.
Bridging gaps in connectivity through Setu Bandhan Scheme has been possible, thanks to unwavering commitment of Hon PM Shri @narendramodi ji to all round development of Arunachal Pradesh. New bridges will improve our people’s ease of living and give a boost to local economy too.… pic.twitter.com/lzaxBtom7h
— Pema Khandu པདྨ་མཁའ་འགྲོ་། (@PemaKhanduBJP) October 12, 2023
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.