ನವದೆಹಲಿ: ಪ್ಯಾಲೇಸ್ಟೇನ್ ಜೊತೆ ಸಂಘರ್ಷದಲ್ಲಿ ತೊಡಗಿರುವ ಇಸ್ರೇಲ್ಗೆ ಭಾರತ ನೈತಿಕ ಸ್ಥೈರ್ಯ ತುಂಬುತ್ತಿದೆ. ಇಸ್ರೇಲ್ ಕೂಡ ಭಾರತದ ಬೆಂಬಲಕ್ಕೆ ಕೃತಜ್ಞತೆ ಸಲ್ಲಿಸಿದೆ. ಇಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಮೋದಿಗೆ ಕರೆ ಮಾಡಿ ಪ್ರಸ್ತುತ ನಡೆಯುತ್ತಿರುವ ಸ್ಥಿತಿಗತಿಗಳ ಬಗ್ಗೆ ವಿವರಿಸಿದ್ದಾರೆ.
ಈ ಬಗ್ಗೆ ಸ್ವತಃ ಮೋದಿಯವರು ಟ್ವಿಟ್ ಮಾಡಿದ್ದು, “ನಾನು ಪ್ರಧಾನಿ ನೆತನ್ಯಾಹು ಅವರಿಗೆ ಫೋನ್ ಕರೆಗಾಗಿ ಮತ್ತು ನಡೆಯುತ್ತಿರುವ ಪರಿಸ್ಥಿತಿಯ ಕುರಿತು ಅಪ್ಡೇಟ್ ಒದಗಿಸಿದ್ದಕ್ಕಾಗಿ ಕೃತಜ್ಞತೆ ಸಲ್ಲಿಸುತ್ತೇನೆ. ಈ ಸಂಕಷ್ಟದ ಸಮಯದಲ್ಲಿ ಭಾರತದ ಜನರು ಇಸ್ರೇಲ್ ಜೊತೆ ದೃಢವಾಗಿ ನಿಂತಿದ್ದಾರೆ. ಭಾರತವು ಎಲ್ಲಾ ರೂಪಗಳು ಮತ್ತು ಅಭಿವ್ಯಕ್ತಿಗಳ ಭಯೋತ್ಪಾದನೆಯನ್ನು ಬಲವಾಗಿ ಮತ್ತು ನಿಸ್ಸಂದಿಗ್ಧವಾಗಿ ಖಂಡಿಸುತ್ತದೆ” ಎಂದಿದ್ದಾರೆ.
ಇಸ್ರೇಲ್ ಮತ್ತು ಭಾರತ ಮಿತ್ರರಾಷ್ಟ್ರಗಳಾಗಿದ್ದು, ಮೋದಿ ಮತ್ತು ಬೆಂಜಮಿನ್ ನಡುವೆ ಬಲವಾದ ಸ್ನೇಹವಿದೆ. ಹಮಾಸ್ ದಾಳಿಯನ್ನು ಈ ಮೊದಲೂ ಮೋದಿ ಖಂಡಿಸಿ ಇಸ್ರೇಲ್ ಜೊತೆ ಭಾರತ ನಿಲ್ಲುತ್ತದೆ ಎಂದು ಹೇಳಿದ್ದರು.
I thank Prime Minister @netanyahu for his phone call and providing an update on the ongoing situation. People of India stand firmly with Israel in this difficult hour. India strongly and unequivocally condemns terrorism in all its forms and manifestations.
— Narendra Modi (@narendramodi) October 10, 2023
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.