ನವದೆಹಲಿ: ಈ ಬಾರಿಯ ಏಷ್ಯನ್ ಗೇಮ್ಸ್ನಲ್ಲಿ ಭಾರತೀಯ ತಂಡವು ಹಿಂದಿನ ಆವೃತ್ತಿಯ 70 ರ ಸಂಖ್ಯೆಯನ್ನು ದಾಟುವ ಮೂಲಕ ತನ್ನ ಅತ್ಯುತ್ತಮ ಪದಕ ಸಾಧನೆಯನ್ನು ದಾಖಲಿಸಿದೆ.
ಜಕಾರ್ತ ಮತ್ತು ಪಾಲೆಂಬಾಂಗ್ನಲ್ಲಿ ನಡೆದ 2018 ರ ಏಷ್ಯನ್ ಗೇಮ್ಸ್ನಲ್ಲಿ ಭಾರತದ ಕ್ರೀಡಾಪಟುಗಳು 16 ಚಿನ್ನ, 23 ಬೆಳ್ಳಿ ಮತ್ತು 31 ಕಂಚು ಸೇರಿದಂತೆ 70 ಪದಕಗಳೊಂದಿಗೆ ಅತ್ಯುತ್ತಮ ಸಾಧನೆ ಮಾಡಿದ್ದರು.
ಅಕ್ಟೋಬರ್ 4 ರಂದು ನಡೆದ 35 ಕಿಮೀ ಮಿಶ್ರ ಓಟದ ನಡಿಗೆ ಸ್ಪರ್ಧೆಯಲ್ಲಿ ಭಾರತೀಯ ರೇಸ್ ವಾಕರ್ಗಳಾದ ಮಂಜು ರಾಣಿ ಮತ್ತು ರಾಮ್ ಬಾಬೂ ಅವರು ಕಂಚಿನ ಪದಕವನ್ನು ಗಳಿಸಿದರು, ಈ ಮೂಲಕ ಭಾರತ 2018 ರ ಜಕಾರ್ತಾ ಗೇಮ್ಸ್ನಲ್ಲಿನ ಸಾಧನೆಯನ್ನು ಸರಿ ಹೊಂದಿಸಲು ಸಹಾಯವಾಯಿತು. ಈ ಬಾರಿ ಕ್ರೀಡಾಳುಗಳು 100ರ ಗಡಿ ದಾಟಿ ಪದಕಗಳನ್ನು ಸಾಧಿಸಲಿ ಎಂದು ಭಾರತೀಯರು ಆಶಿಸುತ್ತಿದ್ದಾರೆ.
✨ 𝗛𝗜𝗦𝗧𝗢𝗥𝗜𝗖 𝗠𝗢𝗠𝗘𝗡𝗧 𝗔𝗧 𝗧𝗛𝗘 𝗔𝗦𝗜𝗔𝗡 𝗚𝗔𝗠𝗘𝗦! ✨
With this gold in archery, 🇮🇳’s medal tally at #AsianGames2022 now stands tall at an incredible 71 medals! 🇮🇳🏅
Our athletes’ dedication and hard work have made this moment possible🔥
Let’s keep the cheers… pic.twitter.com/mgrB9ackxV
— SAI Media (@Media_SAI) October 4, 2023
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.