ನವದೆಹಲಿ: ಅಕ್ಟೋಬರ್ 10 ರೊಳಗೆ 41 ರಾಜತಾಂತ್ರಿಕರನ್ನು ವಾಪಸು ಕರೆಸಿಕೊಳ್ಳುವಂತೆ ಭಾರತವು ಕೆನಡಾಗೆ ಸೂಚನೆ ನೀಡಿದೆ.
ಸೆಪ್ಟೆಂಬರ್ನಲ್ಲಿ ಉಭಯ ದೇಶಗಳ ರಾಜತಾಂತ್ರಿಕರ ವಿಷಯದಲ್ಲಿ ಭಾರತವು ಸಮಾನತೆಯ ಸಮಸ್ಯೆಯನ್ನು ಎತ್ತಿತ್ತು, ವಿದೇಶಾಂಗ ವ್ಯವಹಾರಗಳ ವಕ್ತಾರ ಅರಿಂದಮ್ ಬಾಗ್ಚಿ ಸೆಪ್ಟೆಂಬರ್ 21, 2023 ರಂದು ಪತ್ರಿಕಾಗೋಷ್ಠಿಯಲ್ಲಿ ರಾಜತಾಂತ್ರಿಕರ ಸಂಖ್ಯೆಯಲ್ಲಿ ಸಮಸ್ಯೆಯುಂಟಾಗಿದೆ ಎಂದು ಹೇಳಿದ್ದರು. ಈಗಾಗಲೇ ಕೆನಡಾದೊಂದಿಗೆ ಮಾತುಕತೆ ನಡೆಸಲಾಗಿದೆ ಮತ್ತು ಕೆನಡಾದ ರಾಜತಾಂತ್ರಿಕರಲ್ಲಿ ಕಡಿತವನ್ನು ಶೀಘ್ರದಲ್ಲೇ ನಿರೀಕ್ಷಿಸಬಹುದು ಎಂದಿದ್ದರು.
ಅಕ್ಟೋಬರ್ 10 ರ ನಂತರ ಭಾರತದಲ್ಲಿ ಉಳಿಯುವ ರಾಜತಾಂತ್ರಿಕರಿಗೆ ರಾಜತಾಂತ್ರಿಕ ವಿನಾಯಿತಿಯನ್ನು ಹಿಂತೆಗೆದುಕೊಳ್ಳಬಹುದು ಎಂದು ಭಾರತವು ಕೆನಡಾಕ್ಕೆ ಸೂಚಿಸಿದೆ ಎಂದು ಫೈನಾನ್ಶಿಯಲ್ ಟೈಮ್ಸ್ ವರದಿ ಮಾಡಿದೆ.
ನಿಜ್ಜರ್ ಹತ್ಯೆಯಲ್ಲಿ ಭಾರತದ ಪಾತ್ರವಿದೆ ಎಂದು ಆರೋಪಿಸಿದ ನಂತರ ಭಾರತ ಮತ್ತು ಕೆನಡಾ ನಡುವೆ ಉದ್ವಿಗ್ನತೆ ಉಲ್ಬಣಗೊಂಡಿದೆ. ಬೆನ್ನಲ್ಲೇ, ಕೆನಡಾ ಮತ್ತು ಭಾರತ ತಲಾ ಒಬ್ಬ ರಾಜತಾಂತ್ರಿಕರನ್ನು ತಮ್ಮ ತಮ್ಮ ದೇಶದಿಂದ ಹೊರಹಾಕಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.