ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ತ್ರಾಲ್ನಲ್ಲಿ ಇಂದು ನಡೆದ ಕಾರ್ಯಾಚರಣೆಯ ವೇಳೆ ಉಗ್ರರ ಎರಡು ಅಡಗುತಾಣಗಳನ್ನು ಭೇದಿಸಲಾಗಿದೆ. ಸುಳಿವಿನ ಮೇರೆಗೆ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಮತ್ತಯ ಭಾರತೀಯ ಸೇನೆಯ 42 ರಾಷ್ಟ್ರೀಯ ರೈಫಲ್ಸ್ (RR) ಜಂಟಿಯಾಗಿ ಗುಲ್ಶನ್ಪೋರಾ ತ್ರಾಲ್ನಲ್ಲಿರುವ ನಾಗಬಲ್ ಅರಣ್ಯದ ಪ್ರದೇಶದಲ್ಲಿ ಸರ್ಪಗಾವಲು ಹಾಕಿದರು. ಬಳಿಕ ಕಾರ್ಯಾಚರಣೆಯನ್ನು ನಡೆಸಲಾಯಿತು ಮತ್ತು ಶೋಧದ ಸಮಯದಲ್ಲಿ ಎರಡು ಭಯೋತ್ಪಾದಕರ ಅಡಗುತಾಣಗಳನ್ನು ಭೇದಿಸಲಾಯಿತು.
ಉಗ್ರರ ಅಡಗುತಾಣಗಳನ್ನು ಭೇದಿಸಿರುವ ಬಗ್ಗೆ ಭಾರತೀಯ ಸೇನೆ ಮಾಹಿತಿ ನೀಡಿದೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಇತ್ತೀಚೆಗೆ ಭಯೋತ್ಪಾದಕ ಚಟುವಟಿಕೆಗಳು ಹೆಚ್ಚುತ್ತಿವೆ ಎಂದು ವರದಿಯಾಗಿದೆ. ಇದರಿಂದಾಗಿ ಭದ್ರತಾ ಪಟೆಗಳು ನಿರಂತರ ಕಾರ್ಯಾಚರಣೆಯನ್ನು ನಡೆಸುತ್ತಿವೆ.
ಮತ್ತೊಂದು ಘಟನೆಯಲ್ಲಿ, ಕುಪ್ವಾರದಲ್ಲಿ ನಡೆಸಲಾಗುತ್ತಿರುವ ಎನ್ಕೌಂಟರ್ನಲ್ಲಿ ಇಬ್ಬರು ಭಯೋತ್ಪಾದಕರು ಹತರಾಗಿದ್ದಾರೆ. ಮಾಚಲ್ ವಲಯದ ಕುಮ್ಕಾಡಿ ಪ್ರದೇಶದಲ್ಲಿ ಎನ್ಕೌಂಟರ್ ನಡೆದಿದೆ. ಈ ಪ್ರದೇಶದಲ್ಲಿ ಉಗ್ರರು ಅಡಗಿರುವ ಬಗ್ಗೆ ಮಾಹಿತಿ ಸಿಕ್ಕಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಕುಪ್ವಾರ ಪೊಲೀಸರು ಈ ಬಗ್ಗೆ ಮಾಹಿತಿಯನ್ನು ನೀಡಿ, “ಗುಪ್ತಚರ ಮಾಹಿತಿಯ ಆಧಾರದ ಮೇಲೆ ಮಚಲ್ ಸೆಕ್ಟರ್ನ ಕುಮ್ಕಾಡಿ ಪ್ರದೇಶದಲ್ಲಿ ಸೇನೆ ಮತ್ತು ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಇದುವರೆಗೆ 2 ಒಳನುಸುಳುತ್ತಿದ್ದ ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದೆ. ಕಾರ್ಯಾಚರಣೆ ಇನ್ನೂ ಪ್ರಗತಿಯಲ್ಲಿದೆ” ಎಂದಿದೆ.
Jammu & Kashmir | Acting on a specific tip off, J&K Police and Army's 42 RR laid a cordon in the forest area of Nagbal Forest, Gulshanpora Tral. During searches, two terror hideouts were busted: Indian Army
(Source: Indian Army) pic.twitter.com/kXkRbkp3wV
— ANI (@ANI) September 30, 2023
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.