ಅಹ್ಮದಾಬಾದ್: ಇಸ್ರೋ ಮುಖ್ಯಸ್ಥ ಎಸ್. ಸೋಮನಾಥ್ ಅವರು ದೇಶದ ವಿವಿಧ ಪವಿತ್ರ ಸ್ಥಳಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ. ಇಂದು ಅವರು ಗುಜರಾತಿನ ಪವಿತ್ರ ಸೋಮನಾಥ ದೇಗುಲಕ್ಕೆ ಭೇಟಿ ನೀಡಿ ಪ್ರಾರ್ಥನೆ ನಡೆಸಿದರು.
ಚಂದ್ರಯಾನ-3 ಯಶಸ್ಸಿಗೂ ಮುನ್ನ ಮತ್ತು ಭಾರತದ ಚೊಚ್ಚಲ ಸೌರ ಮಿಷನ್ ಆದಿತ್ಯ ಎಲ್1 ಉಡಾವಣೆಗೂ ಮುನ್ನಾ ತಿರುಪತಿ ಹಾಗೂ ಸುಳ್ಳೂರುಪೇಟೆ ಪಟ್ಟಣದ ಚೆಂಗಾಲಮ್ಮ ದೇವಸ್ಥಾನದಲ್ಲಿ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದ ಎಸ್. ಸೋಮನಾಥ್ ಅವರು, ಇದೀಗ ಗುಜರಾತ್ ನ ಪವಿತ್ರ ಕ್ಷೇತ್ರ ಸೋಮನಾಥ ದೇವಾಲಯಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಇಸ್ರೋ ಮುಖ್ಯಸ್ಥರು, ಚಂದ್ರಯಾನ-3 ಯಶಸ್ವಿಯಾಗಿರುವುದು ನಮ್ಮ ಅದೃಷ್ಟವಾಗಿದೆ. ಪ್ರಯತ್ನದ ಫಲವಾಗಿ ಚಂದ್ರನ ದಕ್ಷಿಣ ಧ್ರುವದಲ್ಲಿ ವಿಕ್ರಮ್ ಲ್ಯಾಂಡರ್ ಲ್ಯಾಂಡ್ ಆಗಿದೆ. ಇದು ಸೋಮನಾಥ ದೇವರ ಆಶೀರ್ವಾದವಾಗಿದೆ. ನಾವು ಇತರ ಮಿಷನ್ ಗಾಗಿ ಕೆಲಸ ಮಾಡುತ್ತಿದ್ದು, ನಮಗೆ ದೇವರಿಂದ ಶಕ್ತಿ ಹಾಗೂ ಆಶೀರ್ವಾದದ ಅಗತ್ಯವಿದೆ ಎಂದರು.
#WATCH | ISRO Chief S Somnath offers prayers and does Puja at Shree Somnath temple in Gujarat
(Video Source: Somnath Temple Trust) pic.twitter.com/cVdC00YWd7
— ANI (@ANI) September 28, 2023
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.