ನವದೆಹಲಿ: ಭಾರತ ವಿರೋಧಿಗಳು, ಪ್ರತ್ಯೇಕತಾವಾದಿ ಭಯೋತ್ಪಾದಕರ ವಿರುದ್ಧ ಬೃಹತ್ ಕಾರ್ಯಾಚರಣೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ಸಂಸ್ಥೆ ಬುಧವಾರ 6 ರಾಜ್ಯಗಳಾದ್ಯಂತ ಪ್ರಮುಖ ದಾಳಿಗಳನ್ನು ನಡೆಸುತ್ತಿದೆ. ಖಲಿಸ್ಥಾನ್-ಗ್ಯಾಂಗ್ಸ್ಟರ್ ಜಾಲ ಭೇದಿಸುವುದು ಕಾರ್ಯಾಚರಣೆಯ ಮುಖ್ಯ ಉದ್ದೇಶ ಎನ್ನಲಾಗಿದೆ.
ವರದಿಗಳ ಪ್ರಕಾರ, ಲಾರೆನ್ಸ್, ಬಾಂಬಿಹಾ ಮತ್ತು ಅರ್ಶ್ ದಲ್ಲಾ ಗ್ಯಾಂಗ್ಗಳ ಸಹಚರರಿಗೆ ಸೇರಿದ 51 ಸ್ಥಳಗಳಲ್ಲಿ ದಾಳಿ ನಡೆಸಲಾಗುತ್ತಿದೆ. ಪಂಜಾಬ್ನ ಮೋಗಾ ಜಿಲ್ಲೆಯ ತಖ್ತುಪುರ ಗ್ರಾಮದಲ್ಲಿ ಮದ್ಯದ ಗುತ್ತಿಗೆದಾರರೊಬ್ಬರ ಮನೆ ಮೇಲೆ ಎನ್ಐಎ ಅಧಿಕಾರಿಗಳು ಬುಧವಾರ ಬೆಳ್ಳಂಬೆಳಗ್ಗೆ ಕ್ಷಿಪ್ರ ದಾಳಿ ನಡೆಸಿದ್ದಾರೆ. ದರೋಡೆಕೋರ ಅರ್ಶ್ ದಲಾ ಈ ಗುತ್ತಿಗೆದಾರನಿಂದ ಹಣಕ್ಕೆ ಬೇಡಿಕೆ ಇಟ್ಟಿದ್ದನು ಮತ್ತು ಈ ಗುತ್ತಿಗೆದಾರನು ಹಣದ ಸ್ವಲ್ಪ ಭಾಗವನ್ನು ಅರ್ಶ್ ದಲಾಗೆ ನೀಡಿದ್ದನು. ಈ ನಿಟ್ಟಿನಲ್ಲಿ ಎನ್ಐಎ ವಿಚಾರಣೆ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ.
ಉತ್ತರಾಖಂಡದ ಉಧಮ್ ಸಿಂಗ್ ನಗರದ ಬಾಜ್ಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಗನ್ ಹೌಸ್ನ ಮೇಲೂ ಎನ್ಐಎ ದಾಳಿ ನಡೆಸಿದೆ. ಉತ್ತರಾಖಂಡದ ಡೆಹ್ರಾಡೂನ್ ಜಿಲ್ಲೆಯ ಕ್ಲೆಮೆಂಟೌನ್ ಪೊಲೀಸ್ ಠಾಣೆ ವ್ಯಾಪ್ತಿಯ ಮತ್ತೊಂದು ಮನೆಯ ಮೇಲೆ ಎನ್ಐಎ ದಾಳಿ ಮಾಡಿದೆ.
#WATCH | A team of NIA is conducting raids in Suratgarh and Rajiyasar in Sri Ganganagar district of Rajasthan
In Suratgarh, the raid is underway at the residence of a student leader.
The National Investigation Agency (NIA) is conducting searches at 51 locations across the… pic.twitter.com/KRHu60YxOH
— ANI (@ANI) September 27, 2023
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.