ಮುಂಬೈ: 2008 ರ ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿ ಮುಂಬೈನ ವಿಶೇಷ NIA ನ್ಯಾಯಾಲಯವು ಎಲ್ಲಾ ಏಳು ಆರೋಪಿಗಳನ್ನು ಖುಲಾಸೆಗೊಳಿಸಿದ ನಂತರ, ಪ್ರಕರಣದ ಆರೋಪಿಯಾಗಿದ್ದ ಮಾಜಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ನ್ಯಾಯಾಲಯದಲ್ಲಿ ಭಾವುಕರಾಗಿದ್ದಾರೆ ಎಂದು ವರದಿಯಾಗಿದೆ.
ನ್ಯಾಯಾಧೀಶ ಎ.ಕೆ. ಲಹೋಟಿ ಅವರನ್ನು ಉದ್ದೇಶಿಸಿ ಮಾತನಾಡಿದ ಪ್ರಜ್ಞಾ, ಸುದೀರ್ಘ ಕಾನೂನು ಹೋರಾಟದ ಸಮಯದಲ್ಲಿ ತಾನು ಅನುಭವಿಸಿದ ಕಳಂಕ ಮತ್ತು ಅವಮಾನಗಳ ಬಗ್ಗೆ ವಿವರಿಸಿದ್ದಾರೆ.
“ನಾನು ಪೊಲೀಸರ ಬಳಿ ಬಂದೆ ಮತ್ತು ನನ್ನ ಜೀವನವನ್ನು ಹಾಳುಮಾಡುವಷ್ಟು ಹಿಂಸೆಯನ್ನು ಅನುಭವಿಸಿದೆ. 17 ವರ್ಷಗಳ ಕಾಲ ನಾನು ಸನ್ಯಾಸಿ ಜೀವನವನ್ನು ನಡೆಸಿದೆ. ಜನರು ನನ್ನನ್ನು ಭಯೋತ್ಪಾದಕಿಯಂತೆ ನೋಡುತ್ತಿದ್ದರು. ನನಗೆ ನೆಮ್ಮದಿಯಿಂದ ಬದುಕಲು ಸಾಧ್ಯವಾಗಲಿಲ್ಲ. ನಾನು ಸನ್ಯಾಸಿಯಾಗಿದ್ದ ಕಾರಣ, ನಾನು ಬದುಕುಳಿದೆ. ಆದರೆ ಭಗವಂತ ನನಗಾಗಿ ಈ ಪ್ರಕರಣದಲ್ಲಿ ಹೋರಾಡುತ್ತಿದ್ದಾನೆ” ಎಂದು ಅವರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
“ಕನಿಷ್ಠ ಪಕ್ಷ ಈ ನ್ಯಾಯಾಲಯ ನನ್ನ ಮಾತನ್ನು ಕೇಳಿದೆ. ನಾನು ಪ್ರಕರಣವನ್ನು ಗೆದ್ದಿಲ್ಲ, ಆದರೆ ಕೇಸರಿ ಗೆದ್ದಿದೆ. ಭಗವಾ (ಕೇಸರಿ) ಭಯೋತ್ಪಾದಕ ಎಂದು ಯಾರು ಕರೆದರೂ, ದೇವರು ಅವರನ್ನು ಎಂದಿಗೂ ಕ್ಷಮಿಸುವುದಿಲ್ಲ” ಎಂದಿದ್ದಾರೆ.
Addressing the judge in the NIA Court, Sandhvi Pragya Singh says, "I said this from the very beginning that those who are called for investigation there should be a basis behind that. I was called by them for investigation and was arrested and tortured. This ruined my whole life.… https://t.co/GNyiAclNoF pic.twitter.com/zSxIYurGX0
— ANI (@ANI) July 31, 2025
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.