ನವದೆಹಲಿ: ಎರಡನೇ ವಿಶ್ವ ಯುದ್ಧದ ಸಂದರ್ಭದಲ್ಲಿ ನಾಜಿ ಮಿಲಿಟರಿ ಘಟಕದಲ್ಲಿ ಸೇವೆ ಸಲ್ಲಿಸಿದ ಸೇನಾ ಜನರಲ್ ಅನ್ನು ಇತ್ತೀಚಿಗೆ ಕೆನಡಾ ಸರ್ಕಾರ ಸಂಸತ್ತಿನಲ್ಲಿ ಗೌರವಿಸಿತ್ತು. ಈ ಘಟನೆಯನ್ನು ಅಲ್ಲಿನ ಪ್ರತಿಪಕ್ಷದ ನಾಯಕ ಖಂಡಿಸಿದ್ದಾರೆ ಮತ್ತು ಪ್ರಧಾನಿ ಜಸ್ಟಿನ್ ಟ್ರುಡೋ ಅವರ ಕ್ಷಮೆಯಾಚನೆಗೆ ಆಗ್ರಹಿಸಿದ್ದಾರೆ.
ಶುಕ್ರವಾರ, ಕೆನಡಾದ ಆಡಳಿತ ನಾಜಿ ಮಿಲಿಟರಿಯಲ್ಲಿದ್ದ 98 ವರ್ಷದ ಯಾರೋಸ್ಲಾವ್ ಹುಂಕಾ ಅವರನ್ನು ಸನ್ಮಾನಿಸಿದೆ. ಯುದ್ಧದ ಸಮಯದಲ್ಲಿ ನಾಜಿನ 14 ನೇ ವಾಫೆನ್ ಗ್ರೆನೇಡಿಯರ್ ವಿಭಾಗದಲ್ಲಿ ಇವರು ಸೇವೆ ಸಲ್ಲಿಸಿದ್ದರು. ಕೃತ್ಯವನ್ನು ಖಂಡಿಸಿ ಟ್ವಿಟ್ ಮಾಡಿರುವ ಕೆನಡಾದ ಪ್ರತಿಪಕ್ಷ ನಾಯಕ ಪಿಯರೆ ಪೊಯಿಲಿವ್ರೆ, ಕೆನಡಾದ ಪಿಎಂ ಜಸ್ಟಿನ್ ಟ್ರುಡೊ ಅವರು ಯಹೂದಿ ಸಮುದಾಯಕ್ಕೆ ವೈಯಕ್ತಿಕವಾಗಿ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದ್ದಾರೆ.
“ಹೌಸ್ ಆಫ್ ಕಾಮನ್ಸ್”ನ ಮಹಡಿಯಲ್ಲಿ ಪರಿಚಯಿಸುವ ಮತ್ತು ಗೌರವಿಸುವ ಮೊದಲು ಯಾವುದೇ ವ್ಯಕ್ತಿಯ ಹಿನ್ನಲೆಯನ್ನು ಪರಿಶೀಲಿಸಬೇಕು” ಎಂದು ಅವರು ಟ್ರಡೋ ಸರ್ಕಾರಕ್ಕೆ ತಿಳಿ ಹೇಳಿದರು.
ಕೆನಡಿಯನ್ ಹೌಸ್ ಆಫ್ ಕಾಮನ್ಸ್ನಲ್ಲಿ ನಡೆದ ಈ ಬೆಳವಣಿಗೆಯನ್ನು ಪ್ರಪಂಚದಾದ್ಯಂತದ ಯಹೂದಿ ಗುಂಪುಗಳು ತೀವ್ರವಾಗಿ ಟೀಕಿಸಿವೆ.
It has come out today that Justin Trudeau personally met with and honoured a veteran of the 14th Waffen Grenadier Division of the SS (a Nazi division).
Liberals then arranged for this Nazi veteran to be recognized on the floor of the House of Commons during the visit of the… https://t.co/9JFUEqsdW8
— Pierre Poilievre (@PierrePoilievre) September 24, 2023
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.