ವಾಷಿಂಗ್ಟನ್: ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಅವರು ಭಾರತದ ವಿರುದ್ಧ ಮಾಡಿರುವ ಆರೋಪಗಳಿಂದ ಭಾರತಕ್ಕಿಂತ ಹೆಚ್ಚಾಗಿ ಕೆನಡಾಕ್ಕೆ ದೊಡ್ಡ ಅಪಾಯಕ್ಕೆ ಕಾರಣವಾಗಲಿದೆ ಎಂದು ಪೆಂಟಗನ್ ಮಾಜಿ ಅಧಿಕಾರಿ ಮೈಕೆಲ್ ರೂಬಿನ್ ಅವರು ಹೇಳಿದ್ದಾರೆ.
ಒಂದು ವೇಳೆ ಅಮೆರಿಕಾ ಭಾರತ ಮತ್ತು ಕೆನಡಾದ ನಡುವೆ ಆಯ್ಕೆ ಮಾಡಬೇಕಾದ ಪರಿಸ್ಥಿತಿ ಬಂದರೆ ಅದು ಖಂಡಿತವಾಗಿಯೂ ಭಾರತವನ್ನೇ ಆಯ್ಕೆ ಮಾಡುತ್ತದೆ. ಕೆನಡಾಕ್ಕಿಂತ ಭಾರತವು ಅಮೆರಿಕಾಗೆ ಹೆಚ್ಚು ಮುಖ್ಯವಾಗಿದೆ ಮತ್ತು ಕೆನಡಾ ಭಾರತದೊಂದಿಗೆ ಸಂಘರ್ಷಕ್ಕಿಳಿಯುವುದು ಆನೆಯ ವಿರುದ್ಧ ಇರುವೆ ಹೋರಾಡಿದಂತೆ ಎಂದು ಅವರು ಹೇಳಿದ್ದಾರೆ.
ಜಸ್ಟಿನ್ ಟ್ರುಡೊ ಅವರ ಕಳಪೆ ಅನುಮೋದನಾ ರೇಟಿಂಗ್ಗಳನ್ನು ಉಲ್ಲೇಖಿಸಿ ರೂಬಿನ್ ಅವರು, ಅವರು ಪ್ರಧಾನಿ ಹುದ್ದೆಯಲ್ಲಿ ಹೆಚ್ಚು ಸಮಯ ಇರುವುದಿಲ್ಲ ಮತ್ತು ಅವರು ಹೋದ ನಂತರ ಯುಎಸ್ ಸಂಬಂಧವನ್ನು ಪುನರ್ನಿರ್ಮಿಸಬಹುದು ಎಂದು ಹೇಳಿದ್ದಾರೆ.
“ಪ್ರಧಾನಿ ಟ್ರುಡೊ ಅವರು ದೊಡ್ಡ ತಪ್ಪು ಮಾಡಿದ್ದಾರೆ ಎಂದು ನಾನು ಭಾವಿಸುತ್ತೇನೆ. ಅವರು ಸಮರ್ಥಿಸಿಕೊಳ್ಳಲು ಸಾಧ್ಯವಾಗದ ರೀತಿಯಲ್ಲಿ ಆರೋಪಗಳನ್ನು ಮಾಡಿದ್ದಾರೆ. ಅವರು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ ಮತ್ತು ಅವರು ಮಾಡಿದ ಆರೋಪಗಳನ್ನು ಬೆಂಬಲಿಸಲು ಅವರ ಬಳಿ ಸಾಕ್ಷ್ಯಗಳಿಲ್ಲ. ಅಲ್ಲದೇ ಅವರ ಸರ್ಕಾರವು ಭಯೋತ್ಪಾದಕನಿಗೆ ಏಕೆ ಆಶ್ರಯ ನೀಡುತ್ತಿದೆ ಎಂಬುದನ್ನು ಅವರು ವಿವರಿಸಬೇಕಾಗಿದೆ” ಎಂದು ಮಾಜಿ ಪೆಂಟಗನ್ ಅಧಿಕಾರಿ ಹೇಳಿದ್ದಾರೆ.
“ಇಬ್ಬರು ಸ್ನೇಹಿತರ ನಡುವೆ ಆಯ್ಕೆ ಮಾಡುವ ಸನ್ನಿವೇಶವನ್ನು ಯುಎಸ್ ಬಯಸುವುದಿಲ್ಲ ಎಂದು ನಾನು ಭಾವಿಸುತ್ತೇನೆ. ಆದರೆ ನಾವು ಇಬ್ಬರು ಸ್ನೇಹಿತರ ನಡುವೆ ಆಯ್ಕೆ ಮಾಡಬೇಕಾದರೆ ನಾವು ಹೆಚ್ಚಾಗಿ ಭಾರತವನ್ನು ಆಯ್ಕೆ ಮಾಡುತ್ತೇವೆ. ಏಕೆಂದರೆ ನಿಜ್ಜಾರ್ ಭಯೋತ್ಪಾದಕನಾಗಿದ್ದ ಮತ್ತು ಭಾರತ ನಮ್ಮ ಅತ್ಯಂತ ಪ್ರಮುಖ ಪಾಲುದಾರ” ಎಂದು ಮೈಕೆಲ್ ರೂಬಿನ್ ಹೇಳಿದ್ದಾರೆ.
#WATCH | Washington, DC | On allegations by Canada, Michael Rubin, former Pentagon official and a senior fellow at the American Enterprise Institute says, "… I suspect that the United States doesn't want to be pinned in the corner to choose between 2 friends, but if we have to… pic.twitter.com/tlWr6C6p7e
— ANI (@ANI) September 23, 2023
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.