ನವದೆಹಲಿ: ಐತಿಹಾಸಿಕ ಕ್ರಮದಲ್ಲಿ, ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧಂಖರ್ ಅವರು ಮಹಿಳಾ ಮೀಸಲಾತಿ ಮಸೂದೆಯನ್ನು ಗಮನದಲ್ಲಿಟ್ಟುಕೊಂಡು ರಾಜ್ಯಸಭೆಯಲ್ಲಿ 13 ಮಂದಿ ಸಂಪೂರ್ಣ ಮಹಿಳಾ ಉಪಾಧ್ಯಕ್ಷರ ಸಮಿತಿಯನ್ನು ರಚಿಸಿದ್ದಾರೆ.
ನಾರಿ ಶಕ್ತಿ ವಂದನ್ ಅಧಿನಿಯ 2023 ಎಂದು ಕರೆಯಲ್ಪಡುವ ಮಹಿಳಾ ಮೀಸಲಾತಿ ಮಸೂದೆಯನ್ನು ರಾಜ್ಯಸಭೆಯು ಚರ್ಚಿಸುತ್ತಿರುವುದರಿಂದ ಈ 13 ಮಹಿಳಾ ರಾಜ್ಯಸಭಾ ಉಪಾಧ್ಯಕ್ಷರ ಸಮಿತಿಯನ್ನು ಕೇವಲ ಒಂದು ದಿನಕ್ಕಾಗಿ ರಚನೆ ಮಾಡಲಾಗಿದೆ. ಈ ಸಮಿತಿಯು ಪಿ.ಟಿ ಉಷಾ, ಜಯಾ ಬಚ್ಚನ್, ಸರೋಜ್ ಪಾಂಡೆ, ಡೋಲಾ ಸೇನ್, ಸುಲತಾ ದೇವು ಮತ್ತು ಡಾ. ಫೌಜಿಯಾ ಖಾನ್ ಅವರನ್ನು ಒಳಗೊಂಡಿದೆ.
ರಾಜ್ಯಸಭಾ ಉಪಾಧ್ಯಕ್ಷ ಕುರ್ಚಿಯ ಮೇಲೆ ಈ ಮಹಿಳೆಯರ ಉಪಸ್ಥಿತಿಯು ವಿಶ್ವಕ್ಕೆ ಪ್ರಬಲವಾದ ಸಂದೇಶವನ್ನು ಕಳುಹಿಸುತ್ತದೆ ಮತ್ತು ಬದಲಾವಣೆಯ ಯುಗಕಾಲದ ಕ್ಷಣದಲ್ಲಿ ಮಹಿಳೆಯರಿ ಕಮಾಂಡಿಂಗ್ ಸ್ಥಾನವನ್ನು ಹೊಂದಿದ್ದಾರೆ ಎಂಬುದನ್ನು ಇದು ಸಂಕೇತಿಸುತ್ತದೆ ಎಂದು ಧಂಖರ್ ಅವರು ಒತ್ತಿ ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.