ನವದೆಹಲಿ: ಚಂದ್ರನಲ್ಲಿ ರಾತ್ರಿ ಕಳೆದು ಬೆಳಕು ಹರಿಯುವ ಹಿನ್ನೆಲೆಯಲ್ಲಿ ಚಂದ್ರಯಾನ-3 ರ ಲ್ಯಾಂಡರ್ ಮತ್ತು ರೋವರ್ ಎರಡು ವಾರಗಳ ಸುದೀರ್ಘ ನಿದ್ರೆಯ ಬಳಿಕ ಎಚ್ಚರಗೊಳ್ಳಲು ಸಜ್ಜಾಗಿವೆ.
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಸೆಪ್ಟೆಂಬರ್ 2 ರಂದು ಲ್ಯಾಂಡರ್ ವಿಕ್ರಮ್ ಮತ್ತು ರೋವರ್ ಪ್ರಗ್ಯಾನ್ ಅನ್ನು ಸುರಕ್ಷಿತವಾಗಿ ಆಫ್ ಮಾಡಿ ಸ್ಲೀಪ್ ಮೋಡ್ನಲ್ಲಿ ಇರಿಸಲಾಗಿದೆ ಎಂದು ಘೋಷಿಸಿತ್ತು. ಇದೀಗ ವಿಕ್ರಮ್ ಮತ್ತು ಪ್ರಗ್ಯಾನ್ ಮತ್ತೆ ಎಚ್ಚರಗೊಂಡು ಕೆಲಸ ಮಾಡಲು ಮುಂದಾಗಲಿವೆ.
“ಸೆಪ್ಟೆಂಬರ್ 22, 2023 ರಂದು ಚಂದ್ರನಲ್ಲಿ ನಿರೀಕ್ಷಿಸಲಾದ ಮುಂದಿನ ಸೂರ್ಯೋದಯದಲ್ಲಿ ಬೆಳಕನ್ನು ಸ್ವೀಕರಿಸಲು ಸೌರ ಫಲಕವು ಕೇಂದ್ರಿತವಾಗಿದೆ. ರಿಸೀವರ್ ಅನ್ನು ಆನ್ನಲ್ಲಿ ಇರಿಸಲಾಗಿದೆ” ಎಂದು ಇಸ್ರೋ ಟ್ವಿಟ್ ಮಾಡಿದೆ.
ಒಂದು ವೇಳೆ ಸೆಪ್ಟೆಂಬರ್ 22 ರಂದು ಎಚ್ಚರಗೊಳ್ಳದಿದ್ದರೆ, ಅದು “ಭಾರತದ ಚಂದ್ರನ ರಾಯಭಾರಿಯಾಗಿ ಶಾಶ್ವತವಾಗಿ ಅಲ್ಲಿ ಉಳಿಯುತ್ತಾರೆ” ಎಂದು ಬಾಹ್ಯಾಕಾಶ ಸಂಸ್ಥೆ ಇಸ್ರೋ ಹೇಳಿದೆ.
ಹಾಪ್ ಪ್ರಯೋಗದೊಂದಿಗೆ ವಿಕ್ರಮ್ ಲ್ಯಾಂಡರ್ “ಮಿಷನ್ ಉದ್ದೇಶಗಳನ್ನು ಮೀರಿ ಸಾಧಿಸಿದೆ” ಎಂದು ಇಸ್ರೋ ಹೇಳಿದೆ.
ಚಂದ್ರಯಾನ-3, ಭಾರತದ ಮೂರನೇ ಚಂದ್ರನ ಕಾರ್ಯಾಚರಣೆಯ ಉದ್ದೇಶಗಳು ಸುರಕ್ಷಿತ ಮತ್ತು ಮೃದುವಾದ ಲ್ಯಾಂಡಿಂಗ್, ಚಂದ್ರನ ಮೇಲ್ಮೈಯಲ್ಲಿ ರೋವರ್ ರೋವಿಂಗ್ ಮತ್ತು ಇನ್-ಸಿಟು ವೈಜ್ಞಾನಿಕ ಪ್ರಯೋಗಗಳನ್ನು ಒಳಗೊಂಡಿದೆ.
ವಿಕ್ರಮ್ ಲ್ಯಾಂಡರ್ ಆಗಸ್ಟ್ 23 ರಂದು ಯಶಸ್ವಿಯಾಗಿ ಸಾಫ್ಟ್ ಲ್ಯಾಂಡಿಂಗ್ ಆದ ನಂತರ ಚಂದ್ರನ ದಕ್ಷಿಣ ಧ್ರುವದ ಬಳಿ ಶಿವಶಕ್ತಿ ಬಿಂದುವಿನಲ್ಲಿ ವಿರಮಿಸುತ್ತಿದೆ.
Chandrayaan-3 Mission:
The Rover completed its assignments.It is now safely parked and set into Sleep mode.
APXS and LIBS payloads are turned off.
Data from these payloads is transmitted to the Earth via the Lander.Currently, the battery is fully charged.
The solar panel is…— ISRO (@isro) September 2, 2023
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.