ನವದೆಹಲಿ: ಇಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸುತ್ತಿರುವ ಮೋದಿ ದೆಹಲಿಯ ಮೆಟ್ರೋದಲ್ಲಿ ಸಂಚರಿಸಿ ಪ್ರಯಾಣಿಕರೊಂದಿಗೆ ಸಂವಾದ ನಡೆಸಿದರು. ದೆಹಲಿಯ ದ್ವಾರಕ ಏರ್ಪೋರ್ಟ್ ಎಕ್ಸ್ಪ್ರೆಸ್ ಮಾರ್ಗದ ವಿಸ್ತರಣೆಯನ್ನು ಉದ್ಘಾಟಿಸಿದ ಬಳಿಕ ಪ್ರಧಾನಿ ನರೇಂದ್ರ ಮೋದಿ ಮೆಟ್ರೋ ರೈಲಿನಲ್ಲಿ ಸಾಮಾನ್ಯ ಜನರೊಂದಿಗೆ ಪ್ರಯಾಣಿಸಿದರು.
ಈ ವೇಳೆ ತಮ್ಮನ್ನು ಸ್ವಾಗತಿಸಿದ ಮಕ್ಕಳಿಗೆ ಮೋದಿಯವರು ಚಾಕ್ಲೇಟ್ಗಳನ್ನು ನೀಡಿದ್ದು, ಅನೇಕ ಪ್ರಯಾಣಿಕರು ಇವರೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡರು. ಅಲ್ಲದೇ ಪ್ರಧಾನಿ ದೆಹಲಿ ಮೆಟ್ರೋ ರೈಲು ನಿಗಮದ (DMRC) ಸಿಬ್ಬಂದಿಯೊಂದಿಗೆ ಮಾತನಾಡಿದರು. ಹೈಸ್ಪೀಡ್ ಕಾರಿಡಾರ್ ಅನ್ನು ದ್ವಾರಕಾ ಸೆಕ್ಟರ್ 21 ನಿಲ್ದಾಣದಿಂದ ಯಶೋಭೂಮಿ ದ್ವಾರಕಾ ಸೆಕ್ಟರ್ 25 ನಿಲ್ದಾಣಕ್ಕೆ ವಿಸ್ತರಿಸಲಾಗಿದೆ. ಸುಮಾರು 2 ಕಿಲೋಮೀಟರ್ ಉದ್ದದ ವಿಸ್ತರಣೆ ದ್ವಾರಕ ಸೆಕ್ಟರ್ 21 ಮತ್ತು ಇಂಡಿಯಾ ಇಂಟರ್ನ್ಯಾಷನಲ್ ಕನ್ವೆನ್ಷನ್ ಸೆಂಟರ್ ಅನ್ನು ಸಂಪರ್ಕಿಸುತ್ತದೆ.
ಹೈಸ್ಪೀಡ್ ಕಾರಿಡಾರ್ ಅನ್ನು ದ್ವಾರಕಾ ಸೆಕ್ಟರ್ 21 ನಿಲ್ದಾಣದಿಂದ ಯಶೋಭೂಮಿ ದ್ವಾರಕಾ ಸೆಕ್ಟರ್ 25 ನಿಲ್ದಾಣಕ್ಕೆ ವಿಸ್ತರಿಸಲಾಗಿದೆ. ಸುಮಾರು 2 ಕಿಲೋಮೀಟರ್ ಉದ್ದದ ವಿಸ್ತರಣೆ ದ್ವಾರಕ ಸೆಕ್ಟರ್ 21 ಮತ್ತು ಇಂಡಿಯಾ ಇಂಟರ್ನ್ಯಾಷನಲ್ ಕನ್ವೆನ್ಷನ್ ಸೆಂಟರ್ ಅನ್ನು ಸಂಪರ್ಕಿಸುತ್ತದೆ. ಈ ವಿಭಾಗವನ್ನು ಸೇರಿಸುವುದರಿಂದ ನವದೆಹಲಿಯಿಂದ ಯಶೋಭೂಮಿ ದ್ವಾರಕಾ ಸೆಕ್ಟರ್ 25ರವರೆಗಿನ ಏರ್ಪೋರ್ಟ್ ಎಕ್ಸ್ಪ್ರೆಸ್ ಲೈನ್ನ ಒಟ್ಟು ಉದ್ದ 24.9 ಕಿಲೋ ಮೀಟರ್ ಆಗಲಿದೆ ಎಂದು ಡಿಎಂಆರ್ಸಿ ಪ್ರಕಟಣೆಯಲ್ಲಿ ತಿಳಿಸಿದೆ.
#WATCH | Passengers in Delhi metro extend their wishes to Prime Minister Narendra Modi on his 73rd birthday. PM Modi travelled by metro, earlier today pic.twitter.com/fZjxjqzExa
— ANI (@ANI) September 17, 2023
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.