ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ 73ನೇ ಜನ್ಮದಿನದ ಅಂಗವಾಗಿ ಅಸ್ಸಾಂನಲ್ಲಿ ಇಂದು ಒಂದು ಕೋಟಿ ಸಸಿಗಳನ್ನು ನೆಡುವ ಮೂಲಕ ಗಿನ್ನೆಸ್ ದಾಖಲೆ ಬರೆಯುವ ಪ್ರಯತ್ನ ಮಾಡಲಾಗಿದೆ. ರಾಜಧಾನಿ ದಿಸ್ಪುರದಿಂದ ದೂರದ ಭೈರಬಕುಂಡದವರೆಗೆ, ರಾಜ್ಯದಾದ್ಯಂತ ಜನರು ಈ ಬೃಹತ್ ಗಿಡ ನೆಡುವ ಅಭಿಯಾನದಲ್ಲಿ ಭಾಗವಹಿಸಿದರು, ಇದನ್ನು “ಅಮೃತ್ ಬ್ರಿಕ್ಷ್ಯ ಜನ ಆಂದೋಲನ” ಎಂದು ಹೆಸರಿಸಲಾಗಿದೆ.
“ಅಸ್ಸಾಂ ಇತಿಹಾಸವನ್ನು ಸೃಷ್ಟಿಸುತ್ತದೆ! ಇಂದು ನಾನು 1 ಕೋಟಿ ಸಸಿಗಳನ್ನು ನೆಡುವ ಸಲುವಾಗಿ ಅಮೃತ್ ಬ್ರಿಕ್ಷ್ಯ ಜನ ಆಂದೋಲನಕ್ಕೆ ಸೇರಿಕೊಂಡಿದ್ದೇನೆ. ಇದು ಮರದ ಆರ್ಥಿಕತೆ, ಸ್ವಚ್ಛ ಪರಿಸರವನ್ನು ನಿರ್ಮಿಸಲು ಮತ್ತು ಹಸಿರು ಗ್ರಹದ ಚಾಂಪಿಯನ್ ಆಗಿರುವ ಪ್ರಧಾನಿ ಮೋದಿಯವರು ಜನ್ಮದಿನವನ್ನು ಆಚರಿಸಲು ಈ ಜನ ಕೇಂದ್ರಿತ ಅಭಿಯಾನವನ್ನು ಆಯೋಜಿಸಲಾಗಿದೆ” ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ.
ಅಸ್ಸಾಂನಾದ್ಯಂತ ಸುಮಾರು 40 ಲಕ್ಷ ಮಹಿಳಾ ಸ್ವ-ಸಹಾಯ ಗುಂಪುಗಳ ಸದಸ್ಯರು ಭಾಗವಹಿಸಿದ್ದಾರೆ ಮತ್ತು ತಲಾ ಎರಡು ಸಸಿಗಳನ್ನು ನೆಟ್ಟಿದ್ದಾರೆ. ಒಟ್ಟು 80 ಲಕ್ಷ ಸಸಿ ಇಂದು ನೆಡಲಾಗಿದೆ. ಉಳಿದಂತೆ 20 ಲಕ್ಷ ಸಸಿಗಳನ್ನು ಅಂಗನವಾಡಿ ಕಾರ್ಯಕರ್ತೆಯರು, ಚಹಾ ತೋಟದ ಕಾರ್ಮಿಕರು, ಸರ್ಕಾರಿ ಅಧಿಕಾರಿಗಳು, ಪೊಲೀಸ್ ಮತ್ತು ಅರಣ್ಯ ಬೆಟಾಲಿಯನ್ಗಳು ಮತ್ತು ರಾಜ್ಯದ ಸಾರ್ವಜನಿಕರು ಸೇರಿದಂತೆ ಸಮಾಜದ ವಿವಿಧ ಕ್ಷೇತ್ರಗಳಿಗೆ ಸೇರಿ ನೆಟ್ಟಿದ್ದಾರೆ.
Assam creates history!
Today I joined the #AmritBrikshya Jan Andolan to plant 1 cr saplings, a citizen-led movement to build a tree economy, a clean environment and celebrate the birthday of a true champion of the Green Planet – Adarniya Shri Narendra Modi ji. @narendramodi pic.twitter.com/EmfMRd7YVv
— Himanta Biswa Sarma (@himantabiswa) September 17, 2023
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.