ಪಾಟ್ನಾ: ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಇಂಡಿ ಅಲಯನ್ಸ್ ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಭೂಮಿ ಮೇಲೆ ರಾಹುಲ್ ಪ್ರಧಾನಿಯಾಗಲು ಸಾಧ್ಯವಿಲ್ಲ, ಪ್ರಧಾನಿಯಾಗಲು ಬಯಸಿದರೆ ಸೂರ್ಯ ಅಥವಾ ಚಂದ್ರನಲ್ಲಿಗೆ ಹೋಗಬೇಕಾಗುತ್ತದೆ ಎಂದು ಹೇಳಿದ್ದಾರೆ.
ನಳಂದ ವಿಶ್ವವಿದ್ಯಾಲಯದ ವೈಶಾಲಿ ಮಹೋತ್ಸವದಲ್ಲಿ ಶರ್ಮಾ ಭಾಗಿಯಾದರಯ. ನಂತರ ಅವರು ರಾಜ್ಗೀರ್ಗೆ ಭೇಟಿ ನೀಡಿದ್ದರು. ಪಾಟ್ನಾಗೆ ಮರಳಿದ ನಂತರ, ಶರ್ಮಾ ನಿನ್ನೆ ಬಿಜೆಪಿ ಈಶಾನ್ಯ ರಾಜ್ಯಗಳ ಸಂಚಾಲಕ ರಿತುರಾಜ್ ಸಿನ್ಹಾ ಅವರ ನಿವಾಸಕ್ಕೆ ತೆರಳಿದರು. ಅಲ್ಲಿ ಇಂಡಿ ಅಲಯನ್ಸ್ ವಿರುದ್ಧ ವಾಗ್ದಾಳಿ ನಡೆಸಿದ ಅವರು, “ಸನಾತನ ಧರ್ಮವನ್ನು ಪ್ರಶ್ನಿಸುವವರಿಗೆ 2024ರ ಲೋಕಸಭೆ ಚುನಾವಣೆಯಲ್ಲಿ ದೇಶದ ಜನತೆ ತಕ್ಕ ಪಾಠ ಕಲಿಸಲಿದ್ದಾರೆ. ಇವರು ಚಂದ್ರಯಾನವನ್ನು ಗೇಲಿ ಮಾಡಿದರು, ಇನ್ನೊಂದು ಚಂದ್ರಯಾನವನ್ನು ಮಾಡುವಾಗ ಈ ನಾಯಕರನ್ನು ಚಂದ್ರನ ಮೇಲೆ ಬಿಡುವಂತೆ ನಾನು ಇಸ್ರೋದ ವಿಜ್ಞಾನಿಗಳಿಗೆ ವಿನಂತಿಸುತ್ತೇನೆ. ರಾಹುಲ್ ಗಾಂಧಿಯವರ ಸೂಚನೆ ಮೇರೆಗೆ ಇಂಡಿ ಅಲಯನ್ಸ್ ನಾಯಕರು ಸನಾತನ ಧರ್ಮದ ವಿರುದ್ಧ ಹೇಳಿಕೆಗಳನ್ನು ನೀಡುತ್ತಿದ್ದಾರೆ” ಎಂದಿದ್ದಾರೆ.
2024ರಲ್ಲಿ ನರೇಂದ್ರ ಮೋದಿ ಮತ್ತೊಮ್ಮೆ ದೇಶದ ಪ್ರಧಾನಿಯಾಗಲಿದ್ದಾರೆ. ರಾಹುಲ್ ಗಾಂಧಿ ದೇಶದ ಪ್ರಧಾನಿಯಾಗಬೇಕಾದರೆ ಸೂರ್ಯ ಮತ್ತು ಚಂದ್ರನತ್ತ ಪ್ರಯಾಣಿಸಬೇಕು ಎಂದು ಶರ್ಮಾ ಹೇಳಿದ್ದಾರೆ.
ಮುಂಬೈ ಸಮಾವೇಶದ ವೇಳೆ ರಾಷ್ಟ್ರೀಯ ಜನತಾ ದಳದ ಮುಖ್ಯಸ್ಥ ಲಾಲು ಪ್ರಸಾದ್ ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಹೇಳಿಕೆ ನೀಡಿದ್ದು, ಇಸ್ರೋ ವಿಜ್ಞಾನಿಗಳಿಗೆ ಅವರನ್ನು ಚಂದ್ರನ ಮೇಲೆ ಕಳುಹಿಸುವಂತೆ ಸೂಚಿಸಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.