ನವದೆಹಲಿ: ತನ್ನ ಯಶಸ್ವಿ ಚಂದ್ರ ಮತ್ತು ಸೌರ ಕಾರ್ಯಾಚರಣೆಗಳೊಂದಿಗೆ ಬಾಹ್ಯಾಕಾಶದಲ್ಲಿ ಛಾಪು ಮೂಡಿಸಿರುವ ಭಾರತವು ಇದೀಗ ಆಳವಾದ ಸಮುದ್ರದಲ್ಲಿ ಧುಮುಕಲು ಸಿದ್ಧವಾಗಿದೆ. ಭಾರತವು ತನ್ನ ಮಹತ್ವಾಕಾಂಕ್ಷೆಯ ಸಬ್ಮರ್ಸಿಬಲ್ ಸಮುದ್ರಯಾನವನ್ನು ಕೈಗೊಳ್ಳುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ.
ಸಮುದ್ರಯಾನವನ್ನು ಚೆನ್ನೈನ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಓಷನ್ ಟೆಕ್ನಾಲಜಿ (NIOT) ಅಭಿವೃದ್ಧಿಪಡಿಸುತ್ತಿದೆ. ಈ ಮಿಷನ್ ಹೆಚ್ಚು ವಿಶೇಷವಾದದ್ದು ಇದು ಭಾರತದ ಮೊದಲ ಮಾನವಸಹಿತ ಸಾಗರ ಪರಿಶೋಧನಾ ಕಾರ್ಯಾಚರಣೆಯಾಗಿದೆ. NIOT ಚೆನ್ನೈ ಅಭಿವೃದ್ಧಿಪಡಿಸುತ್ತಿರುವ ಸಮುದ್ರಯಾನ ಮಿಷನ್ನ ʼಸಾಗರ ಕ್ರಾಫ್ಟ್ ಮತ್ಸ್ಯ 6000 ʼಮುಂದಿನ ವರ್ಷ ಬಂಗಾಳ ಕೊಲ್ಲಿಯಲ್ಲಿ ಮುಳುಗಲಿದೆ.
ಸಾಗರ ಕ್ರಾಫ್ಟ್ನ ಹೆಸರಿನಲ್ಲಿರುವ 6000 ಸಂಖ್ಯೆಯು ಸಬ್ಮರ್ಸಿಬಲ್ನ 6000 ಮೀಟರ್ಗಳಷ್ಟು ನೀರಿನೊಳಗೆ ಹೋಗುವ ಸಾಮರ್ಥ್ಯವನ್ನು ಚಿತ್ರಿಸುತ್ತದೆ.
ಮತ್ಸ್ಯ 6000 ಸಾಗರನೌಕೆಯು ಆಳ ಸಮುದ್ರದ ಪರಿಶೋಧನೆಗಾಗಿ ವಿವಿಧ ನೀರೊಳಗಿನ ಉಪಕರಣಗಳಾದ ಅಟೋನೋಮಸ್ ಕೋರಿಂಗ್ ಸಿಸ್ಟಮ್ (ACS), ಅಟನೋಮಸ್ ಅಂಡರ್ವಾಟರ್ ವೆಹಿಕಲ್ (AUV) ಮತ್ತು ಡೀಪ್ ಸೀ ಮೈನಿಂಗ್ ಸಿಸ್ಟಮ್ (DSM) ಗಳನ್ನು ಹೊಂದಿದೆ.
Next is "Samudrayaan"
This is 'MATSYA 6000' submersible under construction at National Institute of Ocean Technology at Chennai. India’s first manned Deep Ocean Mission ‘Samudrayaan’ plans to send 3 humans in 6-km ocean depth in a submersible, to study the deep sea resources and… pic.twitter.com/aHuR56esi7— Kiren Rijiju (@KirenRijiju) September 11, 2023
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.