ನವದೆಹಲಿ: ಮಾರಿಷಸ್ ಆರ್ಥಿಕತೆಯ ಎಲ್ಲಾ ಕ್ಷೇತ್ರಗಳಲ್ಲಿ ಭಾರತದ ಬೆಂಬಲವನ್ನು ನಾವು ನೋಡಬಹುದು. ಭಾರತವು ಸಾಮಾಜಿಕ-ಆರ್ಥಿಕ ಅಭಿವೃದ್ಧಿಯಲ್ಲಿ ನಮ್ಮ ಜೊತೆಗಿದೆ. ಮಾರಿಷಸ್ನಲ್ಲಿ ನೀವು ಎಲ್ಲಿಗೆ ಹೋದರೂ, ನೀವು ಭಾರತದ ಬೆಂಬಲದ ಮುದ್ರೆಯನ್ನು ನೋಡುತ್ತೀರಿ” ಎಂದಿದ್ದಾರೆ.
ಭಾರತವು ತನ್ನ ಸಾಮಾಜಿಕ ಆರ್ಥಿಕ ಅಭಿವೃದ್ಧಿಯಡಿ ಪೂರ್ವ ಆಫ್ರಿಕಾದ ರಾಷ್ಟ್ರಕ್ಕೆ ಸಹಾಯ ಮಾಡುತ್ತಿದೆ ಎಂದು ಅವರು ಹೇಳಿದರು.
“ಭಾರತವು ಮಾರಿಷಸ್ನೊಂದಿಗೆ ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದ (ಸಿಇಪಿಎ) ಮಾಡಿಕೊಂಡಿದೆ. ಮಾರಿಷಸ್ ಬಗ್ಗೆ ಭಾರತ ಹೊಂದಿರುವ ಆದ್ಯತೆಗೆ ಇದು ಮತ್ತೊಂದು ಸಾಕ್ಷಿಯಾಗಿದೆ. ಇದು ಈಗ ಉಭಯ ದೇಶಗಳ ನಡುವಿನ ವ್ಯಾಪಾರಕ್ಕೆ ಹೊಸ ಮಾರ್ಗಗಳನ್ನು ತೆರೆದಿದೆ. ಇದು ಎರಡೂ ದೇಶಗಳಿಗೆ ಲಾಭದಾಯಕವಾಗಿದೆ” ಎಂದಿದ್ದಾರೆ.
ಮಾರಿಷಸ್ನಲ್ಲಿ ಸ್ವಾಮಿ ವಿವೇಕಾನಂದ ಅಂತರಾಷ್ಟ್ರೀಯ ಸಮಾವೇಶ ಕೇಂದ್ರವಿದೆ, ಭಾರತದ ಬೆಂಬಲದೊಂದಿಗೆ ಸೈಬರ್ ಟವರ್ ಅನ್ನು ನಿರ್ಮಿಸಿದ್ದೇವೆ, ಅದು ಈಗ ಸೈಬರ್ ಸಿಟಿಯಾಗಿ ಮಾರ್ಪಟ್ಟಿದೆ ಮತ್ತು ಅಟಲ್ ಬಿಹಾರಿ ವಾಜಪೇಯಿ ಅವರ ಗೌರವಾರ್ಥ ನಾವು ಸೈಬರ್ ಟವರ್ಗೆ ಅಟಲ್ ಬಿಹಾರಿ ವಾಜಪೇಯಿ ಟವರ್ ಎಂದು ಹೆಸರಿಸಿದ್ದೇವೆ ಎಂದರು.
ಭಾರತದ ಬೆಂಬಲದೊಂದಿಗೆ, ಮಾರಿಷಸ್ ಹೊಸ ಸುಪ್ರೀಂ ಕೋರ್ಟ್ ಕಟ್ಟಡವನ್ನು ನಿರ್ಮಿಸಿದೆ ಎಂದು ಅವರು ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.