ಮೊರಾಕೊ: ಮಧ್ಯ ಮೊರಾಕೊದಲ್ಲಿ ರಿಕ್ಟರ್ ಮಾಪಕದಲ್ಲಿ 6.8 ರ ತೀವ್ರತೆಯ ಪ್ರಬಲ ಭೂಕಂಪನ ಸಂಭವಿಸಿದ್ದು, ನಂತರ ಕನಿಷ್ಠ 296 ಜನರು ಸಾವನ್ನಪ್ಪಿದ್ದಾರೆ ಎಂದು ಅಲ್ಲಿನ ಆಂತರಿಕ ಸಚಿವಾಲಯ ಶನಿವಾರ ದೃಢಪಡಿಸಿದೆ.
ಯುಎಸ್ ಜಿಯೋಲಾಜಿಕಲ್ ಸರ್ವೆ ಪ್ರಕಾರ, ಭೂಕಂಪನವು 18.5 ಕಿಮೀ ಆಳದಲ್ಲಿ ಮರ್ರಾಕೇಶ್ನ ನೈರುತ್ಯಕ್ಕೆ 71 ಕಿಮೀ ದೂರದಲ್ಲಿರುವ ಹೈ ಅಟ್ಲಾಸ್ ಪರ್ವತಗಳಲ್ಲಿತ್ತು ಎಂದು ಬಿಬಿಸಿ ವರದಿ ಮಾಡಿದೆ. ರಾತ್ರಿ 11.11ಕ್ಕೆ ಭೂಕಂಪ ಸಂಭವಿಸಿದೆ. ಸಾಮಾಜಿಕ ಮಾಧ್ಯಮದಲ್ಲಿನ ವೀಡಿಯೊಗಳು ಭೂಕಂಪನದ ತೀವ್ರತೆಯನ್ನು ತೋರಿಸಿವೆ. ವಿಡಿಯೋದಲ್ಲಿ ಜನರು ರಸ್ತೆಗಳಲ್ಲಿ ಓಡುವುದನ್ನು ತೋರಿಸಿದೆ, ಹಾನಿಗೊಳಗಾದ ಕಟ್ಟಡಗಳು, ಶವಗಳು ಮನಕಲಕುವಂತಿದೆ.
ಭೂಕಂಪದ ಕೇಂದ್ರದಿಂದ ಸುಮಾರು 350 ಕಿಮೀ ದೂರದಲ್ಲಿರುವ ರಾಜಧಾನಿ ರಬಾತ್ನಲ್ಲಿ ಮತ್ತು ಕಾಸಾಬ್ಲಾಂಕಾ ಮತ್ತು ಎಸ್ಸೌಯಿರಾ ನಗರಗಳಲ್ಲಿಯೂ ಸಹ ಕಂಪನಗಳು ಸಂಭವಿಸಿವೆ ಎಂದು ವರದಿಯಾಗಿದೆ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.
People trapped in rubble near earthquake epicenter in Morocco, locals pleading for help in online videos pic.twitter.com/UpNWAQcBAv
— BNO News (@BNONews) September 9, 2023
🚨Breaking: Footage of a building collapsing after the recent earthquake in Morocco🇲🇦
Over 200 feared to have lost their Lives. #prayforMorocco
^
{ Balotelli Richarlison Neymar Valverde Ernest Nuamah Salis Bale Inaki Arda Guler Sully Sasha Obama Santi MacG Hlanga Cassper R33m pic.twitter.com/s9GEJSGmSN— African History & Stats (@247AfricanFacts) September 9, 2023
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.