ನವದೆಹಲಿ: ಸನಾತನ ಧರ್ಮವನ್ನು ಸೊಳ್ಳೆಗಳು, ಡೆಂಗ್ಯೂ, ಮಲೇರಿಯಾ, ಜ್ವರ ಮತ್ತು ಕರೋನಾದೊಂದಿಗೆ ಸಮೀಕರಿಸಿದ ಡಿಎಂಕೆ ನಾಯಕ ಮತ್ತು ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಅವರ ಹೇಳಿಕೆಯನ್ನು ತೀವ್ರವಾಗಿ ಟೀಕಿಸಿರುವ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು, ಸನಾತನ ಧರ್ಮಕ್ಕೆ ಸವಾಲು ಹಾಕುವವರನ್ನು ತಲುಪುವಷ್ಟು ಜೋರಾಗಿ ಶ್ರೀಕೃಷ್ಣನಿಗೆ ಜಪ ಮಾಡಬೇಕು ಎಂದು ಹೇಳಿದ್ದಾರೆ.
ದೆಹಲಿಯ ದ್ವಾರಕಾದಲ್ಲಿ ನಡೆದ ಜನ್ಮಾಷ್ಟಮಿ ಆಚರಣೆಯಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಉದಯನಿಧಿ ಸ್ಟಾಲಿನ್ ಮತ್ತು ಅವರ “ಸನಾತನ ಧರ್ಮ” ಹೇಳಿಕೆಯನ್ನು ಬೆಂಬಲಿಸಿದವರನ್ನು ತರಾಟೆಗೆ ತೆಗೆದುಕೊಂಡರು. ಸನಾತನ ಧರ್ಮಕ್ಕೆ ಸವಾಲೆಸೆದ ಜನರಿಗೆ ನಮ್ಮ ಧ್ವನಿ ತಲುಪಬೇಕು. ಭಕ್ತರು ಬದುಕಿರುವವರೆಗೂ ನಮ್ಮ ಧರ್ಮ ಮತ್ತು ನಂಬಿಕೆಗೆ ಯಾರೂ ಸವಾಲು ಹಾಕಲು ಸಾಧ್ಯವಿಲ್ಲ ಎಂದರು.
ಇದಕ್ಕೂ ಮುನ್ನ ಬುಧವಾರ ಪ್ರಧಾನಿ ನರೇಂದ್ರ ಮೋದಿ ಅವರು ಸಂಪುಟ ಸಚಿವರ ಜತೆಗಿನ ಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಿದರು. ಮೂಲಗಳ ಪ್ರಕಾರ, ಸನಾತನ ಧರ್ಮದ ಹೇಳಿಕೆಗೆ ಸಚಿವರು ತಕ್ಕ ಉತ್ತರ ನೀಡಬೇಕು ಮತ್ತು ವಿರೋಧವನ್ನು ಎದುರಿಸಲು ಸತ್ಯಗಳನ್ನು ಬಳಸಬೇಕು ಎಂದು ಪ್ರಧಾನಿ ಕರೆ ನೀಡಿದ್ದಾರೆ ಎನ್ನಲಾಗಿದೆ.
ಬುಧವಾರ ತಮಿಳುನಾಡು ಕ್ರೀಡಾ ಸಚಿವ ಉದ್ಯನಿಧಿ ಸ್ಟಾಲಿನ್ ಮತ್ತು ಕಾಂಗ್ರೆಸ್ ನಾಯಕ ಪ್ರಿಯಾಂಕ್ ಖರ್ಗೆ ಅವರ ವಿರುದ್ಧ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ. ಉತ್ತರ ಪ್ರದೇಶದ ರಾಂಪುರದಲ್ಲಿ ಇಬ್ಬರು ವಕೀಲರು ನೀಡಿದ ದೂರಿನ ಮೇರೆಗೆ ಎಫ್ಐಆರ್ ದಾಖಲಿಸಲಾಗಿದೆ.
#WATCH | Delhi: "Our voices must reach those people who challenged 'Sanatan Dharma'. Till devotees are alive, no one can challenge our 'dharma' and faith…", says Union Minister Smriti Irani during Janmashtami Mahotsav in Dwarka (06/09) pic.twitter.com/k1PKBIbFUe
— ANI (@ANI) September 7, 2023
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.