ನವದೆಹಲಿ: ಭಾರತದ ಆರ್ಥಿಕತೆಯು ದೀರ್ಘಕಾಲದವರೆಗೆ ಜಾಗತಿಕ ಉಜ್ವಲ ತಾಣವಾಗಿರುತ್ತದೆ, ಜಗತ್ತು ಸಂಘರ್ಷಗಳ ಬಹು ಆಯಾಮದ ಪರಿಣಾಮವನ್ನು ಎದುರಿಸುತ್ತಿದ್ದರೂ ಕೂಡ ಅದು ಉಜ್ವಲ ತಾಣವಾಗಿಯೇ ಮುಂದುವರಿಯುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಸೆಪ್ಟೆಂಬರ್ 9 ರಿಂದ ನವದೆಹಲಿಯಲ್ಲಿ ನಡೆಯಲಿರುವ ಜಿ 20 ಶೃಂಗಸಭೆಗೆ ಮುಂಚಿತವಾಗಿ ಭೌಗೋಳಿಕ ರಾಜಕೀಯ ಅನಿಶ್ಚಿತತೆಗಳು, ವಿಶ್ವಾಸಾರ್ಹ ಜಾಗತಿಕ ಸಂಸ್ಥೆಗಳ ಅಗತ್ಯತೆ ಮತ್ತು ಆರ್ಥಿಕವಾಗಿ ಬೇಜವಾಬ್ದಾರಿ ನೀತಿಗಳಿಂದ ಉಂಟಾಗುವ ಅಪಾಯಗಳಿಂದ ನಲುಗುತ್ತಿರುವ ಜಗತ್ತಿನಲ್ಲಿ ಭಾರತದ ಪಾತ್ರದ ಬಗ್ಗೆ ಪ್ರಧಾನಿ ತಮ್ಮ ದೃಷ್ಟಿಕೋನವನ್ನು ಹಂಚಿಕೊಂಡರು.
ನವದೆಹಲಿಯಲ್ಲಿ ಖಾಸಗಿ ಮಾಧ್ಯಮ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ, ಕಳೆದ 9 ವರ್ಷಗಳಲ್ಲಿ ಸರ್ಕಾರವು ಸಬ್ಕಾ ಸಾಥ್, ಸಬ್ಕಾ ವಿಕಾಸ್, ಸಬ್ಕಾ ವಿಶ್ವಾಸ್ ಮತ್ತು ಸಬ್ಕಾ ಪ್ರಯಾಸ್ ವಿಧಾನವನ್ನು ಅನುಸರಿಸಿದೆ. ಪ್ರಗತಿಯನ್ನು ಮುಂದುವರಿಸಲು ಮತ್ತು ಬೆಳವಣಿಗೆಯ ಫಲವನ್ನು ಕೊನೆಯ ಮೈಲಿಗೆ ತಲುಪಿಸಲು ದೇಶವನ್ನು ಒಟ್ಟುಗೂಡಿಸುವಲ್ಲಿ ಇದು ಉತ್ತಮ ಲಾಭಾಂಶವನ್ನು ನೀಡಿದೆ. ಈ ಮಾದರಿಯ ಯಶಸ್ಸಿಗೆ ಇಂದು ಅಂತಾರಾಷ್ಟ್ರೀಯ ಮನ್ನಣೆಯೂ ಇದೆ ಎಂದು ಪ್ರಧಾನಿ ಒತ್ತಿ ಹೇಳಿದರು.
G20 ಶೃಂಗಸಭೆಗಾಗಿ ಭಾರತದ ದೃಷ್ಟಿಕೋನವನ್ನು ಎತ್ತಿ ತೋರಿಸಿದ ಪ್ರಧಾನಮಂತ್ರಿಯವರು, G20 ಗಾಗಿ ನಮ್ಮ ಧ್ಯೇಯವಾಕ್ಯ, ‘ವಸುಧೈವ ಕುಟುಂಬಕಂʼ G20 ಪ್ರೆಸಿಡೆನ್ಸಿಯತ್ತ ನಮ್ಮ ದೃಷ್ಟಿಕೋನವನ್ನು ಸೂಕ್ತವಾಗಿ ಸೆರೆಹಿಡಿಯುತ್ತದೆ. ಭಾರತಕ್ಕೆ ಇಡೀ ಭೂಮಂಡಲ ಒಂದೇ ಕುಟುಂಬದಂತಿದೆ . ಯಾವುದೇ ಕುಟುಂಬದಲ್ಲಿ, ಪ್ರತಿಯೊಬ್ಬ ಸದಸ್ಯರ ಭವಿಷ್ಯವು ಇತರ ಸದಸ್ಯರೊಂದಿಗೆ ಆಳವಾಗಿ ಸಂಪರ್ಕ ಹೊಂದಿರುತ್ತದೆ. ಆದ್ದರಿಂದ, ನಾವು ಒಟ್ಟಿಗೆ ಕೆಲಸ ಮಾಡಿದರೆ, ನಾವು ಒಟ್ಟಿಗೆ ಪ್ರಗತಿ ಹೊಂದುತ್ತೇವೆ, ಯಾರೂ ಹಿಂದೆ ಬೀಳುವುದಿಲ್ಲ ಎಂದರು.
ಭಾರತವು G20 ಗಾಗಿ ತನ್ನ ಕಾರ್ಯಸೂಚಿಯನ್ನು ರೂಪಿಸಿದಾಗ, ಅದನ್ನು ಸಾರ್ವತ್ರಿಕವಾಗಿ ಸ್ವಾಗತಿಸಲಾಯಿತು. ಯಾಕೆಂದರೆ ಜಾಗತಿಕ ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಹಿಡಿಯಲು ಸಹಾಯ ಮಾಡಲು ಭಾರತವು ತನ್ನ ಪೂರ್ವಭಾವಿ ಮತ್ತು ಸಕಾರಾತ್ಮಕ ವಿಧಾನವನ್ನು ತರುತ್ತದೆ ಎಂದು ಎಲ್ಲರಿಗೂ ತಿಳಿದಿತ್ತು. ಜಿ 20 ಅಧ್ಯಕ್ಷರಾಗಿ, ನಾವು ಜೈವಿಕ ಇಂಧನ ಒಕ್ಕೂಟವನ್ನು ಪ್ರಾರಂಭಿಸುತ್ತಿದ್ದೇವೆ, ಅದು ದೇಶಗಳು ತಮ್ಮ ಶಕ್ತಿಯ ಅಗತ್ಯಗಳನ್ನು ಪೂರೈಸಲು ಸಹಾಯ ಮಾಡುತ್ತದೆ ಮತ್ತು ಆರ್ಥಿಕತೆಯನ್ನು ಸಶಕ್ತಗೊಳಿಸುತ್ತದೆ ಎಂದು ಮೋದಿ ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.