ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮಂಗಳವಾರ ಚಂದ್ರನ ದಕ್ಷಿಣ ಧ್ರುವದಿಂದ ಚಂದ್ರಯಾನ-3 ವಿಕ್ರಮ್ ಲ್ಯಾಂಡರ್ನ 3 ಆಯಾಮದ ‘ಅನಾಗ್ಲಿಫ್’ ಚಿತ್ರವನ್ನು ಬಿಡುಗಡೆ ಮಾಡಿದೆ.
“ಇಲ್ಲಿ ಪ್ರಸ್ತುತಪಡಿಸಲಾದ ಅನಾಗ್ಲಿಫ್ ಅನ್ನು NavCam ಸ್ಟಿರಿಯೊ ಚಿತ್ರಗಳನ್ನು ಬಳಸಿ ರಚಿಸಲಾಗಿದೆ, ಇದು ಪ್ರಗ್ಯಾನ್ ರೋವರ್ನಲ್ಲಿ ಸೆರೆಹಿಡಿಯಲಾದ ಎಡ ಮತ್ತು ಬಲ ಚಿತ್ರಗಳನ್ನು ಒಳಗೊಂಡಿರುತ್ತದೆ” ಎಂದು ಇಸ್ರೋ ಟ್ವಿಟ್ನಲ್ಲಿ ಹೇಳಿದೆ.
ಅನಾಗ್ಲಿಫ್ ಎನ್ನುವುದು ವಸ್ತು ಅಥವಾ ಭೂಪ್ರದೇಶದ ಸ್ಟಿರಿಯೊ ಅಥವಾ ಬಹು-ವೀಕ್ಷಣೆ ಚಿತ್ರಗಳಿಂದ ಮೂರು ಆಯಾಮಗಳಲ್ಲಿ ಸರಳವಾದ ದೃಶ್ಯೀಕರಣವಾಗಿದೆ.
ಪ್ರಸ್ತುತ ಚಂದ್ರನ ಮೇಲೆ ಇದೀಗ ಕತ್ತಲು ಆವರಿಸಿದೆ. 14 ದಿನ ಚಂದ್ರನ ಮೇಲೆ ರಾತ್ರಿ. ಹೀಗಾಗಿ ಸೆ.4 ರಂದು ಚಂದ್ರನ ಮೇಲಿರುವ ಪ್ರಗ್ಯಾನ್ ರೋವರ್ ಹಾಗೂ ವಿಕ್ರಮ್ ಲ್ಯಾಂಡರ್ ನಿದ್ದಿಗೆ ಜಾರಿದೆ. ಇನ್ನು ಸೆ.22ರಂದು ಕೆಲಸ ಆರಂಭಿಸಲು ಸೂಚನೆ ನೀಡಲಾಗುತ್ತದೆ. ಆದರೆ ಪ್ರಗ್ಯಾನ್ ರೋವರ್ ನಿದ್ದೆಗೂ ಜಾರುವ ಮುನ್ನ 3ಡಿ ಫೋಟೋ ಕಳುಹಿಸಿದೆ.
Chandrayaan-3 Mission:
Anaglyph is a simple visualization of the object or terrain in three dimensions from stereo or multi-view images.
The Anaglyph presented here is created using NavCam Stereo Images, which consist of both a left and right image captured onboard the Pragyan… pic.twitter.com/T8ksnvrovA
— ISRO (@isro) September 5, 2023
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.