ನವದೆಹಲಿ: ಈ ವಾರಾಂತ್ಯದ G20 ಶೃಂಗಸಭೆಯಲ್ಲಿ ಭಾಗವಹಿಸುವ ವಿದೇಶಿ ನಾಯಕರಿಗೆ ನೀಡಿದ ಅಧಿಕೃತ ಆಹ್ವಾನದಲ್ಲಿ “ಪ್ರೆಸಿಡೆಂಟ್ ಆಫ್ ಭಾರತ್” ಪದವನ್ನು ಮೊದಲ ಬಾರಿಗೆ ಬಳಸಲಾಗಿದೆ. ಇದು ಅಂತರರಾಷ್ಟ್ರೀಯ ವೇದಿಕೆಯಲ್ಲಿ ಭಾರತದ ಹೆಸರಿನಲ್ಲಿ ಗಮನಾರ್ಹ ಬದಲಾವಣೆಯನ್ನು ಸೂಚಿಸುತ್ತದೆ. ಏಕೆಂದರೆ ಯುಎಸ್ ಅಧ್ಯಕ್ಷ ಜೋ ಬಿಡೆನ್ ಮತ್ತು ಯುಕೆ ಪ್ರಧಾನಿ ರಿಷಿ ಸುನಕ್ ಇತರರನ್ನು ಒಳಗೊಂಡ ಮೆಗಾ ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ʼಭಾರತʼ ಹೆಸರಿನ ಉಲ್ಲೇಖ ಸರ್ಕಾರದ ನಿರ್ಧಾರವನ್ನು ಬಹುತೇಕ ಖಚಿತಪಡಿಸಿದೆ
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸೆಪ್ಟೆಂಬರ್ 9 ರಂದು ಔತಣಕೂಟಕ್ಕೆ G20 ವಿದೇಶಿ ನಾಯಕರು ಮತ್ತು ಮುಖ್ಯಮಂತ್ರಿಗಳನ್ನು ಆಹ್ವಾನಿಸಿದ್ದಾರೆ. ಇದರಲ್ಲಿ “ಪ್ರೆಸಿಡೆಂಟ್ ಆಫ್ ಇಂಡಿಯಾ” ಬದಲಿಗೆ “ಪ್ರೆಸಿಡೆಂಟ್ ಆಫ್ ಭಾರತ್” ಎಂದು ಉಲ್ಲೇಖಿಸಲಾಗಿದೆ. ಇದು ಭಾರತದ ನಾಮಕರಣದ ಮೊದಲ ಹೆಜ್ಜೆ ಎಂದು ಬಣ್ಣಿಸಲಾಗಿದೆ.
ಬಿಜೆಪಿ ನಾಯಕರುಗಳ ಟ್ವಿಟ್ ಕೂಡ ಭಾರತ ಉಲ್ಲೇಖಗಳನ್ನು ಹೊಂದುತ್ತಿರುವುದು ಎಲ್ಲಾ ಊಹಾಪೋಹಗಳಿಗೆ ಮತ್ತಷ್ಟು ಪುಷ್ಟಿ ನೀಡಿದೆ.
जन गण मन अधिनायक जय हे, भारत भाग्य विधाता
जय हो 🇮🇳#PresidentOfBharat pic.twitter.com/C4RmR0uGGS
— Dharmendra Pradhan (@dpradhanbjp) September 5, 2023
Article 52 – Constitution of India.
There shall be a President of INDIA
Can’t get more explicit than this – Can it ??????? pic.twitter.com/9OoPcLBktW
— Manish Tewari (@ManishTewari) September 5, 2023
कांग्रेस को देश के सम्मान एवं गौरव से जुड़े हर विषय से इतनी आपत्ति क्यों है?
भारत जोड़ो के नाम पर राजनीतिक यात्रा करने वालों को “भारत माता की जय” के उद्घोष से नफरत क्यों है?
स्पष्ट है कि कांग्रेस के मन में न देश के प्रति सम्मान है, न देश के संविधान के प्रति और न ही संवैधानिक…
— Jagat Prakash Nadda (@JPNadda) September 5, 2023
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.